ಉಡುಪಿ: ಗಾಂಜಾ ಪ್ರಕರಣಗಳಲ್ಲಿ ಪದೇ ಪದೇ ಭಾಗಿ; ಇಬ್ಬರು ಆರೋಪಿಗಳ ಬಂಧನ

ಉಡುಪಿ: ಗಾಂಜಾ ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗಿರುವ ಇಬ್ಬರು ಆರೋಪಿಗಳನ್ನು ಪಿಟ್ ಎನ್.ಡಿ.ಪಿ.ಎಸ್ ಕಾಯಿದೆ ಅಡಿಯಲ್ಲಿ ಬಂಧಿಸಲಾಗಿದೆ.

ಬಂಧಿತರನ್ನು ಉಪ್ಪೂರು ಗ್ರಾಮದ ಕೊಳಲಗಿರಿಯ ಕೃಷ್ಣ ಆಚಾರಿ ಯಾನೆ ಕೃಷ್ಣ(43) ಹಾಗೂ ಕೇಳಾರ್ಕಳಬೆಟ್ಟುವಿನ ಅಬ್ದುಲ್‌ ಜಬ್ಬಾರ್‌ (27) ಎಂದು ಗುರುತಿಸಲಾಗಿದೆ. ಇವರ ಮೇಲೆ ಜಿಲ್ಲೆಯ ಹಲವು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ. ಇವರನ್ನು ಕೇಂದ್ರ ಕಾರಾಗೃಹ ಧಾರವಾಡಕ್ಕೆ ಕಳುಹಿಸಿ ಬಂಧನದಲ್ಲಿ ಇಡಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿರುವ ಆರೋಪಿಗಳ ಬಗ್ಗೆ ಕಡಿವಾಣ ಹಾಕಲು ಹಾಗೂ ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಜರಗಿಸಲಾಗಿದೆ ಎಂದು ಉಡುಪಿ ಜಿಲ್ಲಾ ಎಸ್ ಪಿ ತಿಳಿಸಿದ್ದಾರೆ.