ಉಡುಪಿ: ಲಯನ್ಸ್ ಕ್ಲಬ್ ಪ್ರಕೃತಿ ವತಿಯಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರೀ ಜಯಂತಿಯನ್ನು ಉಡುಪಿಯ ಶಿರಬಿಡು ಸರಸ್ವತಿ ವಿದ್ಯಾ ಮಂದಿರ ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅದೇ ಸಂದರ್ಭದಲ್ಲಿ ಶಾಲೆಗೆ ದೇಶದ ಗಣ್ಯರ ಫೋಟೋಗಳನ್ನು ಹಸ್ತಾಂತರ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಉಡುಪಿಯ ಆಶಾ ನಿಲಯದಲ್ಲಿ, ನಮ್ಮ ಲಯನ್ಸ್ ಕ್ಲಬ್ ಸದಸ್ಯರಾದ ರಾಜ ವಿಕ್ರಮ್ ಅವರ ಮೊಮ್ಮಗಳಾದ ಕುಮಾರಿ ಸಿಯಾ ಅಶ್ವಿನ್ ಹುಟ್ಟುಹಬ್ಬವನ್ನು ಲಯನ್ಸ್ ಕ್ಲಬ್ನ ಸಹಯೋಗದೊಂದಿಗೆ ಆಚರಿಸಿ ಮಕ್ಕಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಅವರ ಪತ್ನಿ ಶೋಭಾ ವಿಕ್ರಮ್, ಮಗ ಪ್ರಥ್ವಿರಾಜ್ ಹಾಗೂ ಅವರ ಕುಟುಂಬದವರು ಸ್ನೇಹಿತರಿದ್ದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪ್ರಮೋದ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಪ್ರಶಾಂತ್ ಶಿರೂರು, ಕೋಶಾಧಿಕಾರಿ ಸದಾಶಿವ ಶೆಟ್ಟಿ, ಬೆಳ್ಳೆ ಗೋಪಾಲ್ ಶೆಟ್ಟಿ, ಉಮೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಕೆ., ಸುಧಾಕರ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಅಶೋಕ್ ಶೆಟ್ಟಿ, ಸೋಮನಾಥ್ ಪಿ., ಶಂಕರ್ ಶೆಟ್ಟಿ, ಭಾಸ್ಕರ್ ಶೆಟ್ಟಿಗಾರ್, ದಾಮೋದರ್ ವಲಯ ಅಧ್ಯಕ್ಷರಾದ ಶೇಖರ್ ಡಿ. ಶೆಟ್ಟಿ ಹಾಗೂ ಪ್ರಾಂತೀಯ ಕಾರ್ಯದರ್ಶಿ ಗಿರೀಶ್ ಐತಾಳ್ ಉಪಸ್ಥಿತರಿದ್ದರು.

ಆಶಾ ನಿಲಯದ ಮುಖ್ಯೋಪಾಧ್ಯಾಯರಾದ ಕುಮಾರಿ ದಿವ್ಯಾ ಹಾಗೂ ಸಿಬ್ಬಂದಿಗಳು , ಸರಸ್ವತಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲತಾ ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಸಮಾಜಸೇವೆ, ಮಾನವೀಯತೆ ಮತ್ತು ಮಕ್ಕಳೊಂದಿಗೆ ಸಂತಸ ಹಂಚಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು.















