ಗದ್ದುಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಭಜನಾ ಉತ್ಸವ ಸಂಪನ್ನ‌

ಉಡುಪಿ: ಗದ್ದುಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೆಮ್ಮಣ್ಣು ಕಡು ನೀಲಾವರ ಇವರ ಪ್ರಥಮ ವರ್ಷದ ಭಜನಾ ಉತ್ಸವ ವಿಜೃಂಭಣೆಯಿಂದ ನಡೆಯಿತು.ಸಂಜೆ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಹೂವಿನ ಪೂಜೆ ನಡೆದ ಬಳಿಕ ಆರು ಭಜನಾ ತಂಡಗಳ ಕುಣಿತ ಭಜನೆ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು. ವಿಶೇಷವಾಗಿ ಚಂಡೆ ಕುಣಿತ ಭಜನೆ ನಡೆಯಿತು.

ಈ ಸಂದರ್ಭದಲ್ಲಿ ಗದ್ದುಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷರಾದ ಜಯಂತಿ ಜಲಂಧರ ನಾಯಕ್ ಕಾರ್ಯದರ್ಶಿ ಕವಿತಾ ವಾಸುದೇವಾ ನಾಯಕ್ ಕೋಶಾಧಿಕಾರಿ ಇಂದಿರಾ ನರಸಿಂಹ ನಾಯಕ್ ಮತ್ತು ಭಜನಾ ಗುರುಗಳಾದ ವಿಜಯ ಆಚಾರ್ಯ ಪಾಂಡೇಶ್ವರ ಸಾಸ್ತಾನ ಮತ್ತು ಸದಸ್ಯರು ಉಪಸ್ಥಿತರಿದ್ದರು.