ಉಡುಪಿ: ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಹಾಗೂ ಮಣಿಪಾಲ ಸಿಗ್ಮಾ ಹೆಲ್ತ್ ಇನ್ಸೂರೆನ್ಸ್ ಕಂಪೆನಿ ಹಾಗೂ ಮಾಹೆ ಮಣಿಪಾಲ ಸಹಯೋಗದಲ್ಲಿ ₹ 50 ಸಾವಿರದವರೆಗಿನ ಜಿ.ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ಯೋಜನೆಯನ್ನು ಜಾರಿಗೆ ತರಲಾಗಿದೆ.
ಯೋಜನೆಯ ಲಾಭಗಳೇನು.?
ಮಣಿಪಾಲ ಕೆಎಂಸಿ ಆಸ್ಪತ್ರೆಯ ಹೊರ ರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಯಲ್ಲಿ ಶೇ.70, ಉಡುಪಿ ಟಿಎಂಎ ಪೈ ಆಸ್ಪತ್ರೆ ಹೊರ ರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಯಲ್ಲಿ ಶೇ.60 ಹಾಗೂ ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯ ಹೊರ ರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಯಲ್ಲಿ ಶೇ.100 ರಿಯಾಯಿತಿ ಪಡೆಯಬಹುದಾಗಿದೆ. ಅಲ್ಲದೆ ಹೊಸ ಯೋಜನೆಯಲ್ಲಿ ಯಾವುದೇ ಚಿಕಿತ್ಸೆಗೆ ಪ್ರತ್ಯೇಕ ಮಿತಿ ಇಲ್ಲದೆ ₹ 50,000 ಕ್ಲೇಮ್ ಮಾಡಬಹುದು.
ವಿಮೆ ಮಾಡಿದ ಕುಟುಂಬದ ಸದಸ್ಯ ಅಪಘಾತದಲ್ಲಿ ಮೃತ ಪಟ್ಟಲ್ಲಿ ₹ 50 ಸಾವಿರ ಪರಿಹಾರ ವಿಮೆ ದೊರೆಯುತ್ತದೆ.
ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್, ಹಳೆ ಕಾರ್ಡ್, ಆಧಾರ್ ಕಾರ್ಡ್ ಅಥವಾ ಕುಟುಂಬದ ರೇಶನ್ ಕಾರ್ಡ್ ಪ್ರತಿಯನ್ನು ನ.1ರಿಂದ 15ರ ಒಳಗೆ ಮೊಗವೀರ ಯುವ ಸಂಘಟನೆಯ ಜಿಲ್ಲಾ ಕಚೇರಿ, ಮಾಧವ ಮಂಗಳ ಸಮುದಾಯ ಭವನ, ಶಾಮಿಲಿ ಹಾಲ್ನ ಎದುರು, ಅಂಬಲಪಾಡಿ, ಉಡುಪಿ ಈ ವಿಳಾಸದಲ್ಲಿ ಅಥವಾ ಮೊಗವೀರ ಯುವ ಸಂಘಟನೆಯ ಘಟಕಗಳಲ್ಲಿ ತೋರಿಸಿ ನೋಂದಣಿ ಮಾಡಿಕೊಳ್ಳಬಹುದು.












