ಉಡುಪಿ: ಸೆಪ್ಟೆಂಬರ್ 4ರಂದು ‘ಉಚಿತ ಆರೋಗ್ಯ ಮೇಳ’

ಉಡುಪಿ: ಜಯಂಟ್ಸ್ ಗ್ರೂಪ್ ಆಫ್, ಉಡುಪಿ, ವಿಶ್ವಭಾರತಿ ಅಸೋಸಿಯೇಷನ್ ಚಿಟ್ಪಾಡಿ, ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಬೀಡಿನಗುಡ್ಡೆ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಸಿ.ಎಸ್.ಐ ಲೋಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, ಉಡುಪಿ ಇವರು ಜಂಟಿಯಾಗಿ ಆಯೋಜಿಸಿರುವ ಉಚಿತ ಆರೋಗ್ಯ ಮೇಳವು ಸೆಪ್ಟೆಂಬರ್ 4ರಂದು (ಗುರುವಾರ) ಸ್ಥಳ: ಶಾರದಾಂಬ ದೇವಸ್ಥಾನ ವಠಾರ ಚಿಟ್ಪಾಡಿ ಉಡುಪಿ, ಸಮಯ: ಬೆಳಿಗ್ಗೆ 9.೦೦ ರಿಂದ ಮಧ್ಯಾಹ್ನ 1.೦೦ಗಂಟೆಯ ವರೆಗೆ ನಡೆಯಲಿದೆ.

ಈ ಶಿಬಿರದಲ್ಲಿ ಸ್ತ್ರೀ ರೋಗ, ನೇತ್ರ, ಕೀಲು ಮತ್ತು ಎಲುಬು, ಸಾಮಾನ್ಯ ಆರೋಗ್ಯ, ಹಾಗೂ ಮಧುಮೇಹ ತಪಾಸಣೆ ನೆಡೆಯಲಿದೆ.

ಉಡುಪಿ ಮಿಷನ್ ಆಸ್ಪತ್ರೆಯ ನುರಿತ ತಜ್ಞವೈದ್ಯರುಗಳಾದ ಡಾ| ದೀಪಾ ವೈ ರಾವ್, ಡಾ| ಅಕ್ಷತಾ ರಾವ್, ಪ್ರಸೂತಿ ತಜ್ಞರು, ಡಾ| ಅಭಿನಯ್ ಆಶೋಕ್, ನೇತ್ರ ತಜ್ಞರು, ಡಾ| ಅರ್ಜುನ್ ಬಳ್ಳಾಲ್, ಕೀಲು ಮತ್ತು ಎಲುಬು ತಜ್ಞರು, ಡಾ| ವೈಭವ್, ಸಾಮಾನ್ಯ ಆರೋಗ್ಯತಜ್ಞರು ಭಾಗವಹಿಸುವರು. ಸಾರ್ವಜನಿಕರು ಇದರ ಸದುಉಪಯೋಗ ಪಡೆದು ಕೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.