ಉಡುಪಿ: ನೂತನ ಜಿಲ್ಲಾ ವಕ್ಫ್ ಸಲಹಾ ಸಮಿತಿ ರಚನೆ

ಉಡುಪಿ: ಜಿಲ್ಲೆಯಲ್ಲಿ ನೂತನವಾಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ರಚನೆ ಆಗಿದ್ದು, ಮಂಡಳಿಯ ಅಧ್ಯಕ್ಷರಾಗಿ ಸಿ.ಹೆಚ್.ಅಬ್ದುಲ್ ಮುತಾಲ್ಲಿ ಅವರು ಬುಧವಾರ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಅಧಿಕಾರಿ ಎಂ.ಅಬೂಬಕ್ಕರ್, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಮೊಹಮ್ಮದ್ ಅಬ್ದುಲ್ ಸುಬ್ಹಾನ್, ಬದ್ರುದ್ದೀನ್ ತೌಫೀಖ್, ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ ಮತ್ತು ಅಫ್ಸರ್ ಉಚ್ಚಿಲ ಹಾಗೂ ಸದಸ್ಯರುಗಳಾದ ಶೇಖ್ ಆಸೀಫ್ ಕಟಪಾಡಿ, ಜುನೈದ್, ಆದಮ್ ಸಾಹೇಬ್, ಅಬೂಬಕ್ಕರ್ ಹಸನಾರ್, ಸುಬ್ಹಾನ್ ಹೊನ್ನಾಳ ಮತ್ತಿತರರು ಉಪಸ್ಥಿತರಿದ್ದರು.