ಉಡುಪಿ: ಜ.10-11ರಂದು “ಫುಡ್ ಕಾರ್ನಿವಲ್” ಆಹಾರ ಮೇಳ

ಉಡುಪಿ: ಮಹಿಳಾ ಉದ್ಯಮಿಗಳ ವೇದಿಕೆ ಪವರ್ ಸಂಸ್ಥೆೆ ವತಿಯಿಂದ ಜ.10 ಮತ್ತು 11ರಂದು ಅಜ್ಜರಕಾಡು ಪಾರ್ಕ್‌ನಲ್ಲಿ “ಫುಡ್ ಕಾರ್ನಿವಲ್” ಆಹಾರ ಮೇಳವನ್ನು ಆಯೋಜಿಸಲಾಗಿದೆ ಎಂದು ಅಧ್ಯಕ್ಷೆ ಪ್ರಿಯಾ ಕಾಮತ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ‌ ಮಾಹಿತಿ ನೀಡಿದ ಅವರು, ಉಡುಪಿ ಪರ್ಯಾಯೋತ್ಸವ ಪರ್ವಕಾಲದಲ್ಲಿ ನಡೆಯುತ್ತಿರುವ ಈ ಫುಡ್ ಕಾರ್ನಿವಲ್‌ನಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರಗಳ ಪ್ರತ್ಯೇಕ ವಿಭಾಗಗಳನ್ನು ತೆರೆಯಲಾಗುತ್ತದೆ. 60ಕ್ಕಿಿಂತಲೂ ಅಧಿಕ ಮಳಿಗೆಗಳು, 100ಕ್ಕೂ ಅಧಿಕ ವಿಭಿನ್ನ ಆಹಾರ ಪದಾರ್ಥಗಳು, ನಾನಾ ಬಗೆಯ ಖಾದ್ಯಗಳು ಮತ್ತು ವಿವಿಧ ಚಟುವಟಿಕೆಗಳು ಎರಡು ದಿನ ಇರಲಿದೆ ಎಂದರು.

ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ ಜತೆಗೆ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚೆೆಚ್ಚು ಅವಕಾಶ ಒದಗಿಸುವುದು ಇದರ ಉದ್ದೇಶವಾಗಿದೆ. ಫುಡ್ ಕಾರ್ನಿವಲ್ ಎರಡು ದಿನವೂ ಬೆಳಿಗ್ಗೆೆ 10ರಿಂದ ರಾತ್ರಿ 10ರ ವರೆಗೆ ಇರಲಿದೆ.

ಫುಡ್ ಕಾರ್ನಿವಲ್‌ನಲ್ಲಿ ಮ್ಯಾಜಿಕ್ ಶೋ, ಲೈವ್ ಕ್ಯಾರಿಕೆಚರ್, ಎಲೆಕ್ಟ್ರಿಿಕ್ ಫ್ಲಾಸ್ ಮೊಬ್‌ಸ್‌, ವಿವಿಧ ಆಟಗಳು ಇರಲಿವೆ. ಸ್ಟಾಲ್ ಗಳಿಗೆ ಸಾಕಷ್ಟು ಬೇಡಿಕೆ ವ್ಯಕ್ತವಾಗುತ್ತಿದ್ದು, ಮಳಿಗೆ ತೆರೆಯಲು ಬುಕ್ಕಿಿಂಗ್ ನಡೆಯುತ್ತಿದೆ ಎಂದು ಸ್ಥಾಪಕಾಧ್ಯಕ್ಷೆ ರೇಣು ಜಯರಾಮ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಲಿನಿ ಬಂಗೇರ, ವೀಣಾ ಕುಡ್ವ, ತೃಪ್ತಿ ನಾಯಕ್, ರೇವತಿ ನಾಡಿಗೇರ್ ಇದ್ದರು.