ಉಡುಪಿ: ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟಿಯಲ್ಲಿ ಬೆಂಕಿ: ರಸ್ತೆ ಮಧ್ಯೆಯೇ ಸ್ಕೂಟಿ ನಿಲ್ಲಿಸಿ ಅಪಾಯದಿಂದ ಪಾರಾದ ಸವಾರ!

ಉಡುಪಿ: ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟಿಯೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಆತಂಕಗೊಂಡ ಸವಾರ ರಸ್ತೆ ಮಧ್ಯೆಯೇ ಸ್ಕೂಟಿಯನ್ನು ನಿಲ್ಲಿಸಿ ತಕ್ಷಣ ದೂರ ಓಡಿ ಹೋಗಿದ್ದಾನೆ.

ಇದರಿಂದ ಸವಾರ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ. ಬಳಿಕ ಸ್ಥಳೀಯರು ನೀರು ಸುರಿದು ಬೆಂಕಿಯನ್ನು ನಂದಿಸಿದ್ದಾರೆ. ಸ್ಕೂಟಿಗೆ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ.