ಉಡುಪಿ:ಇ-ಖಾತಾ ಸೇವಾ ಶುಲ್ಕ ಪರಿಷ್ಕರಣೆ

ಉಡುಪಿ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ಇ-ಖಾತಾ ಸೇವೆಗೆ ವಿಧಿಸುತ್ತಿರುವ ಶುಲ್ಕದ ಪೈಕಿ ಕರಡು ಇ- ಖಾತೆಗಳನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ರೂ. 10 ನ್ನು ಹಾಗೂ ಅಂತಿಮ ಇ-ಖಾತೆಯನ್ನು ನೀಡುವ ಸೇವೆಗೆ ರೂ. 25 ನ್ನು ಪಡೆದು ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿಗೆ (ಕೆ.ಎಂ.ಡಿ.ಎಸ್) ಸಂದಾಯ ಮಾಡಲು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಆದೇಶಿಸಿದ್ದು, ಉಡುಪಿ ನಗರಸಭೆಯ ಆಡಳಿತಾಧಿಕಾರಿಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಈಗಿರುವ ಖಾತಾ ಶುಲ್ಕವನ್ನು 75 ರೂ.
ನಿಂದ 125 ರೂ.ಗಳಿಗೆ ಪರಿಷ್ಕರಿಸಲು ಅನುಮೋದನೆ ನೀಡಲಾಗಿರುತ್ತದೆ.

ಆದ್ದರಿಂದ ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡ ಮಾಲೀಕರು 2026 ರ ಜನವರಿ 01 ರಿಂದ ಅನ್ವಯವಾಗುವಂತೆ ಮೇಲ್ಕಂಡ ಪರಿಷೃತ
ಶುಲ್ಕವನ್ನು ಪಾವತಿಸಿ, ಇ-ಖಾತೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.