ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ‘ಉಡುಪಿ ದಸರಾ’ಗೆ ಚಾಲನೆ

ಉಡುಪಿ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಉಡುಪಿ ವತಿಯಿಂದ ನ.23ರವರೆಗೆ ನಡೆಯಲಿರುವ 8ನೇ ವರ್ಷದ ಶ್ರೀ ಶಾರದೋತ್ಸವ ‘ಉಡುಪಿ ದಸರಾ’ಗೆ ಅಜ್ಜರಕಾಡು ಶ್ರೀಗೋವಿಂದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉದ್ಯಮಿ ಅಂಡಾರು ದೇವಿಪ್ರಸಾದ್ ಶೆಟ್ಟಿ, ಪ್ರಮುಖರಾದ ಗಣೇಶ್ ಕುಮಾರ್, ರಾಧಾಕೃಷ್ಣ ಮೆಂಡನ್, ಜ್ಯೋತಿ ದೇವಾಡಿಗ, ಸರೋಜಾ ಯಶವಂತ್, ಶೋಭಾ ಶೆಟ್ಟಿ , ಸಾಯಿರಾಧಾ ಡೆವೆಲಪರ್ಸ್ನ ಮಾಲಕ ಮನೋಹರ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ನಾಗೇಶ್ ಹೆಗ್ಡೆ , ಮಟ್ಟು ಲಕ್ಷೀ ನಾರಾಯಣ ರಾವ್, ತಾರಾ ಆಚಾರ್ಯ, ಪದ್ಮಾ ರತ್ನಾಕರ , ಸರೋಜಾ ರಾವ್ , ಹರೀಶ್ , ಸುರೇಶ್ ಶೇರಿಗಾರ್ , ಸುಜಾತ , ಸತೀಶ್ ಕುಮಾರ್ , ಮಹೇಶ್ ಪೂಜಾರಿ ಉಪಸ್ಥಿತರಿದ್ದರು.

ಸಮಿತಿ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಉಡುಪಿ ಪರಿಸರದ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ನೆಡೆಯಿತು. ಸಂಘದ ಪದಿಕಾರಿಗಳು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.