ಮಣಿಪಾಲ:ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿಯಲ್ಲಿ ಸ್ತನ ಪುನರ್ನಿರ್ಮಾಣ ಮತ್ತು ಟಮ್ಮಿ ಟಕ್ (ಹೊಟ್ಟೆ ಗಾತ್ರ ಕಡಿಮೆಗೊಳಿಸುವ/ಬಿಗಿಗೊಳಿಸುವ)ಶಿಬಿರ

ಉಡುಪಿ: ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಹಯೋಗದೊಂದಿಗೆ, ಆಗಸ್ಟ್ 28, 2025 ರ ಗುರುವಾರ ಬೆಳಿಗ್ಗೆ 9:00 ರಿಂದ ಸಂಜೆ 4:30 ರವರೆಗೆ ಆಸ್ಪತ್ರೆ ಆವರಣದಲ್ಲಿ ಸ್ತನ ಪುನರ್ನಿರ್ಮಾಣ ಮತ್ತು ಟಮ್ಮಿ ಟಕ್ (ಹೊಟ್ಟೆ ಗಾತ್ರ ಕಡಿಮೆಗೊಳಿಸುವ/ಬಿಗಿಗೊಳಿಸುವ ) ಶಿಬಿರವನ್ನು ಆಯೋಜಿಸಲಿದೆ.

ಈ ಶಿಬಿರವನ್ನು ಈ ಕೆಳಗಿನ ಪರಿಸ್ಥಿತಿಗಳಿಗೆ ಪರಿಹಾರಗಳನ್ನು ಹುಡುಕುತ್ತಿರುವ ವ್ಯಕ್ತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ:

  • ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ನಂತರ ಸ್ತನ ಬದಲಾವಣೆಗಳು
  • ಗರ್ಭಧಾರಣೆಯ ನಂತರದ ಸ್ತನ ಜೋಲಾಡುವಿಕೆ
  • ಗಮನಾರ್ಹ ತೂಕ ಇಳಿಕೆಯ ನಂತರ ಹೆಚ್ಚುವರಿ ಚರ್ಮ ಮತ್ತು ಜೋಲಾಡುವಿಕೆ
  • ವಯಸ್ಸಿಗೆ ಸಂಬಂಧಿಸಿದ ದೇಹದ ಬದಲಾವಣೆಗಳು

ಶಿಬಿರದಲ್ಲಿ ತಜ್ಞರ ಸಮಾಲೋಚನೆ ಉಚಿತವಾಗಿದೆ. ಅವಶ್ಯ ಪರೀಕ್ಷೆಗಳ ಹಾಗೂ ಶಸ್ತ್ರ ಚಿಕಿತ್ಸೆಗಳ ಮೇಲೆ 20% ರಿಯಾಯಿತಿ ನೀಡಲಾಗುವುದು, ಇದು ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 15, 2025 ರವರೆಗೆ ಮಾನ್ಯವಾಗಿರುತ್ತದೆ.

ಈ ಕಾರ್ಯಕ್ರಮದ ಕುರಿತು ಮಾತನಾಡಿದ ವೈದ್ಯಕೀಯ ಅಧೀಕ್ಷಕರಾದ ಡಾ. ಶಶಿಕಿರಣ್ ಉಮಾಕಾಂತ್, “ದೈಹಿಕ ಬದಲಾವಣೆಗಳಿಂದಾಗಿ ಕೆಲವೊಮ್ಮೆ ಜೀವನಮಟ್ಟಕ್ಕೆ ತೊಂದರೆ ಉಂಟಾಗುವ ಸಂದರ್ಭಗಳಲ್ಲಿ, ಜನರು ತಮ್ಮ ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಮರುಪಡೆಯಲು ಈ ಶಿಬಿರ ಸಹಾಯಕವಾಗಲಿದೆ. ನಮ್ಮ ಸಮುದಾಯದ ಹೆಚ್ಚು ಜನರಿಗೆ ತಜ್ಞ ವೈದ್ಯರ ಆರೈಕೆಯಲ್ಲಿ ಅತ್ಯಾಧುನಿಕ ಪುನರ್‌ನಿರ್ಮಾಣ ಚಿಕಿತ್ಸೆ ದೊರಕಬೇಕೆಂಬುದು ನಮ್ಮ ಪ್ರಯತ್ನ” ಎಂದಿದ್ದಾರೆ

ಹೆಚ್ಚಿನ ಮಾಹಿತಿ ಮತ್ತು ಅಪಾಯಿಂಟ್‌ಮೆಂಟ್‌ಗಳಿಗಾಗಿ, ದೂ: 7338343777 ಸಂಪರ್ಕಿಸಲು ಕೋರಲಾಗಿದೆ.

ಡಾ. ಶಶಿಕಿರಣ್ ಉಮಾಕಾಂತ್

ವೈದ್ಯಕೀಯ ಅಧೀಕ್ಷಕರು – ಡಾ. ಟಿ.ಎಂ.ಎ. ಪೈ ಆಸ್ಪತ್ರೆ, ಉಡುಪಿ