ಉಡುಪಿ: ಆತ್ರಾಡಿಯಲ್ಲಿ ಮನೆ ಮನೆಯಲ್ಲಿ ಭಜನೆ – ವರ ಮಹಾಲಕ್ಷ್ಮಿ ಪೂಜೆ, ರಕ್ಷಾ ಬಂಧನ – ಸಾಧಕರಿಗೆ ಸನ್ಮಾನ

ಉಡುಪಿ: ಮಂಜುನಾಥ ಭಜನಾ ಮಂಡಳಿ ಆತ್ರಾಡಿ ವತಿಯಿಂದ ಶ್ರೀಮತಿ ಕವಿತಾ ಸತ್ಯಾನಂದ ನಾಯಕ್ರವರ ಮನೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಮತ್ತು ಭಜನಾ ಮಹೋತ್ಸವ ವನ್ನು ಆಚರಿಸಲಾಯಿತು.

ಒಂದು ಗಂಟೆಗಳ ಕಾಲ ಭಜನೆ ನಂತರ ಲಕ್ಷೀ ದೇವರಿಗೆ ಮಂಗಳಾರತಿ ಮಾಡಲಾಯಿತು.

ಶ್ರೀಮತಿ ಕವಿತಾರವರು ಸೇರಿರುವ ಅಕ್ಕಂದಿರಿಗೆ ಅರಶಿನ -ಕುಂಕುಮ ಹಚ್ಚಿ ರವಿಕೆ ಕಣ ಗುಲಾಬಿ ಪುಷ್ಪವನ್ನು ನೀಡಿದರು. ಕಳೆದ ಹಲವು ವರ್ಷಗಳಿಂದ ಪ್ರತಿ ಶುಕ್ರವಾರ ಗ್ರಾಮದ ವಿವಿಧ ಮನೆಗಳಿಗೆ ತೆರಳಿ ಭಜನೆ ಮಾಡುವ ಕಾರ್ಯಕ್ರಮದ ಉಸ್ತುವಾರಿಯನ್ನು ಬಹಳ ನಿಷ್ಠೆಯಿಂದ ಮಾಡುತ್ತಿರುವ ಹಿರಿಯರಾದ ಶ್ರೀಮತಿ ರಶ್ಮಿರಾಮದಾಸ್ ನಾಯಕ್ ಮತ್ತು ಮೋಹಿನಿ ರಾಜೀವ ಕರ್ಕೇರ ರವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಶ್ರಾವಣ ಹುಣ್ಣಿಮೆಯ ದಿನವಾದ ಇಂದು ಎಲ್ಲಾ ಅಕ್ಕಂದಿರು ಪರಸ್ಪರ ರಾಕಿಯನ್ನು ಕಟ್ಟಿಕೊಂಡು ಹಿರಿಯರ ಆಶೀರ್ವಾದ ಪಡೆದು “ರಕ್ಷಾ ಬಂಧನ” ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು. ಸಹ ಭೋಜನ ನಂತರ ಕಾರ್ಯಕ್ರಮ ಮುಕ್ತಾಯಗೊಂಡಿತು.