ಉಡುಪಿ:ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾಆದಿಶಕ್ತಿ ಕ್ಷೇತ್ರದಲ್ಲಿ 19ನೇ ಪ್ರತಿಷ್ಠ ವರ್ಧಂತಿ ಮಹೋತ್ಸವದ ಪ್ರಯುಕ್ತ ಪಂಚವಿಂಶತಿ ದ್ರವ್ಯ ಮೀಳಿತ ಅಷ್ಟೋತ್ತರ ಶತ ಬ್ರಹ್ಮ ಕುಂಭಾಭಿಷೇಕ, ಶ್ರೀರಂಗಪೂಜಾ ಮಹೋತ್ಸವ ಸಹಿತ ಬಲಿ ಉತ್ಸವ ಶ್ರೀ ಚಂಡಿಕಾಯಾಗ ಹಾಗೂ ಮಹಾ ಅನ್ನಸಂತರ್ಪಣೆಯೂ ತಾ.09.05.2025 ನೇ ಶುಕ್ರವಾರದಿಂದ ತಾ.13.05.2025 ನೇ ಮಂಗಳವಾರ ದವರೆಗೆ ನಡೆಯಲಿದೆ.
ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಮೇಷ ಮಾಸ ದಿನ ೨೬ ಸಲುವ ವೈಶಾಖ ಶುದ್ಧ ೧೨ ಯು ತಾ. 09-05-2025ರ ಶುಕ್ರವಾರ ಆರಂಭಗೊಂಡು ವೈಶಾಖ ಬಹುಳ ೧ ಯು ತಾ. 13-05-2025ನೇ ಮಂಗಳವಾರ ಪರ್ಯಂತ ಶ್ರೀ ಚಕ್ರಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ 19ನೇ ಪ್ರತಿಷ್ಠ ವರ್ಧಂತಿ ಮಹೋತ್ಸವದ ಪ್ರಯುಕ್ತ ಪಂಚವಿಂಶತಿ ದ್ರವ್ಯ ಮೀಳಿತ ಅಷ್ಟೋತ್ತರ ಶತ ಬ್ರಹ್ಮ ಕುಂಭಾಭಿಷೇಕ, ಶ್ರೀರಂಗಪೂಜಾ ಮಹೋತ್ಸವ ಸಹಿತ ಬಲಿ ಉತ್ಸವ, ಶ್ರೀ ಚಂಡಿಕಾ ಯಾಗ ಹಾಗೂ ಮಹಾ ಅನ್ನಸಂತರ್ಪಣೆಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿರುವುದು.
ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತರುಗಳು ಆಗಮಿಸಿ, ಶ್ರೀ ದುರ್ಗಾ ಆದಿಶಕ್ತಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುವ ಶ್ರೀ ಶ್ರೀ ರಮಾನಂದ ಗುರೂಜೀ ಧರ್ಮಾಧಿಕಾರಿಗಳು, ಶ್ರೀ ಸರ್ವೇಶ ತಂತ್ರಿ ನಿಯೋಜಿತ ತಂತ್ರಿಗಳು, ಶ್ರೀ ಅನೀಶ್ ಆಚಾರ್ಯ ಪ್ರಧಾನ ಅರ್ಚಕರು, ಶ್ರೀ ಇ. ಬಾಲಸುಬ್ರಹ್ಮಣ್ಯ ರಾವ್, ಶ್ರೀಮತಿ ಉಷಾ ರಮಾನಂದ, ಶ್ರೀಮತಿ ಕುಸುಮಾ ನಾಗರಾಜ, ಆಡಳಿತ ಮಂಡಳಿ.

ಧಾರ್ಮಿಕ ಕಾರ್ಯಕ್ರಮಗಳ ವಿವರ:
ತಾ.09-05-2025 ನೇ ಶುಕ್ರವಾರ ಸಂಜೆ ಗಂಟೆ 6.00 ರಿಂದ:
ಋತ್ವಿಜರ ಸ್ವಾಗತ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸಪ್ತ ಶುದ್ಧಿ, ಪ್ರಸಾದ ಶುದ್ದಿ, ವಾಸ್ತು ರಾಕ್ಷೋಗ್ನಾದಿ ಪ್ರಕ್ರಿಯೆ, ಪ್ರಕಾರ ಬಲಿ.
ತಾ.10-05-2025 ನೇ ಶನಿವಾರ ಬೆಳಿಗ್ಗೆ ಗಂಟೆ 7.00 ರಿಂದ:
ಸ್ವಸ್ತಿ ಪುಣ್ಯಾಹ ವಾಚನ, ಆಚಾರ್ಯಾದಿ, ಋತ್ವಿಕ್ ವರ್ಣಿ, ಸಪರಿವಾರ ದೇವರುಗಳಿಗೆ ನವಕ ಪ್ರಧಾನ ಕಲಶ, ಅಧಿವಾಸ ಹೋಮಗಳು, ಕಲಶಾಭಿಷೇಕ, ಪ್ರಸನ್ನ ಪೂಜೆ
ತಾ.11-05-2025 ನೇ ರವಿವಾರ ಬೆಳಿಗ್ಗೆ 8.00ರಿಂದ:
ಶ್ರೀ ನಾಗದೇವರ ಸಾನಿಧ್ಯದ ಪ್ರತಿಷ್ಠ ವರ್ಧಂತಿ ಮಹೋತ್ಸವ ಪಂಚ ವಿಂಶತಿ ಕಲಶಾರಾಧನೆ, ನಮಕ ಪ್ರಧಾನ ಯಾಗ, ಷಟ್ ಶಿರಾ ಸುಬ್ರಹ್ಮಣ್ಯ ಸ್ವಾಮಿಗೆ ಪವಮಾನ ಸೂಕ್ತಯಾಗ ಕಲಶಾಭಿಷೇಕ, ಪರಿವಾರ ದೇವರುಗಳಿಗೆ ಸ್ನಪನ ಕಲಶಾಭಿಷೇಕ, ಆಶ್ಲೇಷ ಬಲಿದಾನ ಅಷ್ಟ ವಟು ಆರಾಧನೆ ಪರಿವಾರ ಪೂಜೆ ಪ್ರಸನ್ನ ಪೂಜೆ ಅನ್ನ ಸಂತರ್ಪಣೆ ಸಾಯಂಕಾಲ ಗಂಟೆ 6.00 ರಿಂದ ಬ್ರಹ್ಮ ಕಲಶ ಮಂಡಲ ರಚನೆ ಭುವನೇಶ್ವರಿ ಪೂಜೆ ಬ್ರಹ್ಮ ಕಲಶಾಧಿವಾಸ ಅಧಿವಾಸ ಹೋಮಗಳು.
ತಾ.12-05-2025 ನೇ ಸೋಮವಾರ ಬೆಳಿಗ್ಗೆ ಗಂಟೆ 6.00 ರಿಂದ:
ಸ್ವಸ್ತಿ ಪುಣ್ಯಾಹವಾಚನ, ಪಂಚಾಮೃತ ಅಭಿಷೇಕ
ಬೆಳಿಗ್ಗೆ ಗಂಟೆ 8:20ಕ್ಕೆ ಒದಗುವ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಚಕ್ರಪೀಠ ಸುರಪೂಜಿತೆಗೆ ಪಂಚವಿಂಶತಿ ದ್ರವ್ಯ ಮೀಳೀತ ಅಷ್ಟೋತ್ತರ ಶತಬ್ರಹ್ಮ ಕುಂಭಾಭಿಷೇಕ ಪ್ರಸನ್ನ ಪೂಜೆ ಮಹಾಪೂಜೆ, ಪಲ್ಲಪೂಜೆ ಮಹಾ ಅನ್ನಸಂತರ್ಪಣೆ ಸಂಜೆ ಗಂಟೆ 6 ರಿಂದ ಆರಾಧನಾ ರಂಗಪೂಜಾ ಮಹೋತ್ಸವ, ಬಲಿ ಉತ್ಸವ ಪಲ್ಲಕ್ಕಿ ಉತ್ಸವ ವಸಂತ ಪೂಜೆ ಅಷ್ಟವಧಾನ ಸೇವೆ ರಾತ್ರಿ ಪೂಜೆ ಪ್ರಸಾದ ವಿತರಣೆ
ತಾ.13-05-2025 ನೇ ಮಂಗಳವಾರ ಬೆಳಿಗ್ಗೆ ಗಂಟೆ 8 ರಿಂದ:
ಶ್ರೀ ಚಂಡಿಕಾ ಯಾಗ ಮಹಾ ಸಂಪ್ರೋಕ್ಷಣೆ ಬ್ರಾಹ್ಮಣ ಸುವಾಸಿನಿ ಆರಾಧನೆ, ಆಚಾರ್ಯ ದಂಪತಿ ಕನ್ನಿಕಾ ಪೂಜೆ ಮಹಾಮಂತ್ರಾಕ್ಷತೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಸಾಯಂಕಾಲ ಗಂಟೆ 6.00ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಸ್ಥಾನದ ನವಶಕ್ತಿ ವೇದಿಕೆಯಲ್ಲಿ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮಾಹಿತಿಗಾಗಿ ಸಂಪರ್ಕಿಸಿ:
(9342749650/ 6360459569, 6362408747)












