ಉಡುಪಿ: ವೈದ್ಯ, ಸಿಎ, ಪತ್ರಕರ್ತರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗೌರವಾರ್ಪಣೆ

ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ವೈದ್ಯ, ಲೆಕ್ಕಪರಿಶೋಧಕ, ಪತ್ರಿಕಾ ದಿನಾಚರಣೆಯ ಪ್ರಯುಕ್ತ ಉಡುಪಿ ದೊಡ್ಡಣ ಗುಡ್ಡೆಯ ವೈದ್ಯ ಡಾ.ಜಯಂತ್ ಕುಮಾರ್, ಲೆಕ್ಕ ಪರಿಶೋಧಕ ಕೆ.ಸುರೇಂದ್ರ ನಾಯಕ್, ಹಿರಿಯ ಪತ್ರಕರ್ತ ನಝೀರ್ ಪೊಲ್ಯ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸತೀಶ್ ಕುಮಾರ್ ಮಂಚಿ, ತಾಲೂಕು ಕೆಡಿಪಿ ಸದಸ್ಯ ಭರತ್ ಮಣಿಪಾಲ, ತೆಂಕನಿಡಿಯೂರು ಗ್ರಾಪಂ ಸದಸ್ಯ ಶರತ್ ಶೆಟ್ಟಿ, ನಗರಸಭಾ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ, ಮಾಜಿ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಮಾಜಿ ನಗರಸಭಾ ಸದಸ್ಯರಾದ ನಾರಾಯಣ ಕುಂದರ್, ಸತೀಶ್ ಪುತ್ರನ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸತೀಶ್ ಕೊಡವೂರು, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಜಯ್ ಆಚಾರ್ಯ, ಯುವ ಉದ್ಯಮಿ ಸಚಿನ್ ಕುಮಾರ್ ಮಣಿಪಾಲ ಉಪಸ್ಥಿತರಿದ್ದರು.