ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ (ರಿ): 34ನೇ ವಾರ್ಷಿಕ ಮಹಾಸಭೆ; ಪಧಾಧಿಕಾರಿಗಳ ಆಯ್ಕೆ

ಉಡುಪಿ; ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ (ರಿ), 34 ನೇ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಮಟ್ಟಾರ್ ವಸಂತ ಕಿಣೆ ರವರ ಅಧ್ಯಕ್ಷತೆಯಲ್ಲಿ ಅಂಬಾಗಿಲಿನ ಅಮೃತ ಗಾರ್ಡನ್ ನಲ್ಲಿ ಜರಗಿತು.

ಸಂಘದ ಮಾಜಿ ಅಧ್ಯಕ್ಷರಾದ ಹರೀಶ್ ಕುಂದರ್ ಸರ್ ಎಮ್ ವಿಶ್ವೇಶ್ವರಯ್ಯ ರವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಗೌರವ ಸಲ್ಲಿಸಿದರು ಸಂಘದ ಮಾಜಿ ಅಧ್ಯಕರುಗಳು ಪುಷ್ಪಾರ್ಚನೆ ಗೈದರು. 2026–27ನೇ ಸಾಲಿನ ಅಧ್ಯಕ್ಷರಾಗಿ ಹಿರಿಯಡ್ಕದ ಆನಂದ್ ಪಾಲಿಮರ್ಸ್ ನ ಮಟ್ಟಾರ್ ವಸಂತ ಕಿಣೆ ರವರು ಅವಿರೋಧವಾಗಿ ಪುನರಾಯ್ಕೆ ಯಾದರು.

ಉಪಾಧ್ಯಕ್ಷರಾಗಿ ಎಮ್ ವಲ್ಲಭ ಭಟ್, ಹೃಷಿಕೇಶ್ ಹೆಗ್ಡೆ , ಕೃಷ್ಣಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯಾಗಿ ಕೆ ರಂಜನ್ ಕಲ್ಕೂರ್, ಕೋಶಾಧಿಕಾರಿಯಾಗಿ ಆನಂದ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸಮೀರ್ ಮೊಹಮ್ಮದ್, ಸುರೇಂದ್ರ ನಾಯಕ್ , ವಿಠ್ಠಲ ಭಕ್ತ, ಅವಿರೋಧವಾಗಿ ಆಯ್ಕೆ ಮಾಡಲಾಯಿತು ಮಟ್ಟಾರ್ ವಸಂತ ಕಿಣೆ ದೀಪಬೆಳಗಿಸಿ ಉದ್ಘಾಟಿಸಿದರು ನನ್ನ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಪುನರಾಯ್ಕೆ ಮಾಡಿದ ಸಂಘದ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇತ್ತೀಚೆಗೆ ಮಣಿಪಾಲ ಕೈಗಾರಿಕಾ ವಸಾಹತಿನ ಕಾಂಕ್ರೀಟ್ ರಸ್ತೆ ಕಾಮಗಾರಿ ಸರ್ಕಾರ ಹಾಗೂ ಖಾಸಗಿ ವಲಯಯ ಸಹಕಾರದಿಂದ ಸಾಕಾರಗೊಂಡಿರುವುದು ನಮ್ಮ ಸಂಘದ ಒಗ್ಗಟ್ಟಿನ ಪ್ರಯತ್ನಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಇದಕ್ಕಾಗಿ ನಿರಂತರ ಶ್ರಮಿಸಿದ ನಮ್ಮ ಮಾಜಿ ಅಧ್ಯಕ್ಷರಾದ ಶ್ರೀ ಹರೀಶ್‌ ಕುಂದರ್‌ ಅವರಿಗೆ ನನ್ನ ಹಾಗೂ ನಿಮ್ಮೆಲ್ಲರ ಪರವಾಗಿ ಅಭಿನಂದಿಸುತ್ತೇನೆ.

ಸಮಾರಂಭದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾದ ವಿನ್ಸೆಂಟ್ ಪಿಂಟೋ, ಮಾಜಿ ಅಧ್ಯಕ್ಷರಾದ ಶ್ರೀಧರ್ ಶೇಣವ, ವಿಶ್ವನಾಥ್ ಭಟ್, ಪ್ರಶಾಂತ್ ಬಾಳಿಗಾ, ಗಣೇಶ್ ಕಿಣೆ, ಜಾನ್ ಡಿಸಿಲ್ವಾ ಎಮ್ ಚಿತ್ತರಂಜನ್ ಭಟ್ ಶುಭ ಹಾರೈಸಿದರು. ಅಧ್ಯಕ್ಷರಾದ ಮಟ್ಟಾರ್ ವಸಂತ್ ಕಿಣೆ ಸ್ವಾಗತಿಸಿದರು. ಕಾರ್ಯದರ್ಶಿ ಕೆ ರಂಜನ್ ಕಲ್ಕೂರ್ ವರದಿ ವಚನ, ವಂದನಾರ್ಪಣೆ ನೆರವೇರಿಸಿದರು. ಜನ್ನನಾದ ಮತ್ತು ವಾಮನ್ ಭಟ್ ಕಾರ್ಯಕ್ರಮ ನಿರೂಪಿಸಿದರು.