ಉಡುಪಿ: ಮಕ್ಕಳ ದಿನಾಚರಣೆ ಅಂಗವಾಗಿ 14 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಮಕ್ಕಳ ಸಾಗಾಣಿಕೆ ವಿರುದ್ಧ, ಮಕ್ಕಳ ಭಿಕ್ಷಾಟನೆ ವಿರುದ್ಧ ಹಾಗೂ ಜಾಲತಾಣ ಸುರಕ್ಷತೆಯ ಕುರಿತು ಅರಿವು ಮೂಡಿಸುವ ಸಲುವಾಗಿ ವಿವಿಧ ಆನ್ಲೈನ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ತಾವು ಸಿದ್ಧಪಡಿಸಿದ ಪ್ರಬಂಧ, ಚಿತ್ರಕಲೆ, ಭಿತ್ತಿಪತ್ರ ತಯಾರಿಸುವುದು, ಪದ್ಯಗಳ ಸಾಫ್ಟ್ ಪ್ರತಿಯನ್ನು ಇ-ಮೇಲ್ ([email protected]) ಗೆ ನವೆಂಬರ್ 4 ರ ಒಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ( icps.karnataka.gov.in) ಸಂಪರ್ಕಿಸುವಂತೆ ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಆಯುಕ್ತಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.