ಉಡುಪಿ: ಉಡುಪಿಯ ವಿಎಸ್ಟಿ ರಸ್ತೆಯ ಗೀತಾಂಜಲಿ ಸಿಲ್ಕ್ಸ್ ಸಮೀಪದ ವೆಸ್ಟ್ಕೋಸ್ಟ್ ಬಿಲ್ಡಿಂಗ್ನಲ್ಲಿರುವ ಸುಲ್ತಾನ್ ಡೈಮಂಡ್ಸ್ ಅಂಡ್ ಗೋಲ್ಡ್ನ ಉಡುಪಿ ಶೋರೂಂನಲ್ಲಿ 15 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ದಕ್ಷಿಣ ಭಾರತದ ಅತೀ ದೊಡ್ಡ ವಜ್ರಾಭರಣಗಳ ಪ್ರದರ್ಶನ ‘ವಿಶ್ವವಜ್ರ’ವನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ. ಶಂಕರ್ ಭಾನುವಾರ ಉದ್ಘಾಟಿಸಿದರು.
ಜಿಪಂ. ಸದಸ್ಯೆ ಗೀತಾಂಜಲಿ ಸುವರ್ಣ,ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀಣಾ ಎಸ್ ಶೆಟ್ಟಿ , ಶಾಸ್ತ್ರ ಶೆಟ್ಟಿ , ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಹಿರಿಯ ವೈದ್ಯ ಡಾ. ರವೀಂದ್ರನಾಥ್ ಶೆಟ್ಟಿ, ಉದ್ಯಮಿ ಅಬ್ದುಲ್ ರೆಹಮಾನ್, ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮುಖ್ಯ ಅತಿಥಿಗಳಾಗಿದ್ದರು.
ಸುಲ್ತಾನ್ ಗ್ರೂಪ್ನ ಆಡಳಿತ ನಿರ್ದೇಶಕ ಟಿ.ಎಂ. ಅಬ್ದುರ್ರವೂ-, ಕಾರ್ಯಕಾರಿ ನಿರ್ದೇಶಕ ಟಿ.ಎಂ. ಅಬ್ದುರ್ರಹೀಂ, ಪ್ರಧಾನ ವ್ಯವಸ್ಥಾಪಕ ಎ.ಕೆ. ಉನ್ನಿತನ್, ಪ್ರಾದೇಶಿಕ ವ್ಯವಸ್ಥಾಪಕ ಸುಮೇಶ್, ಶಾಖಾ ವ್ಯವಸ್ಥಾಪಕ ಅಜ್ಮಲ್, ಸೇಲ್ಸ್ ಮೇನೆಜರ್ ಇಕ್ಬಾಲ್, ಸಿದ್ದೀಕ್ ಹಸನ್, ಮಾರುಕಟ್ಟೆ ವ್ಯವಸ್ಥಾಪಕ ಶಿಯಾಬುದ್ದೀನ್ ಉಪಸ್ಥಿತರಿದ್ದರು.
ಆಸೀ-ಫ್ ಇಕ್ಬಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಈ ಬೃಹತ್ ವಜ್ರಾಭರಣಗಳ ಪ್ರದರ್ಶನದಲ್ಲಿ ಜಗತ್ತಿನಾದ್ಯಂತದ ಐಜಿಐ ಪ್ರಮಾಣೀಕೃತ ವಜ್ರಾಭರಣಗಳ 10 ಸಾವಿರ ಕ್ಯಾರಟ್ಗೂ ಅಧಿಕ ಸಂಗ್ರಹ ಇದೆ. ಇಟಲಿ, -ಫ್ರಾನ್ಸ್, ಟರ್ಕಿ, ಬೆಲ್ಜಿಯಂ, ಅಮೆರಿಕ, ಸಿಂಗಾಪುರ ಮತ್ತು ಮಧ್ಯಪ್ರಾಚ್ಯದ ವಿಶೇಷ
ಅಂತರರಾಷ್ಟ್ರೀಯ ಸಂಗ್ರಹಗಳು ಮತ್ತು ವಿಶೇಷ ಏಕರತ್ನ ಸಂಗ್ರಹಗಳು ಈ ಪ್ರದರ್ಶನದ ಮುಖ್ಯ ಆಕರ್ಷಣೆಯಾಗಿದೆ.
5 ಸಾವಿರದಿಂದ ಒಂದು ಕೋಟಿ ರೂ. ವರೆಗಿನ ಒಂಟಿ ಹವಳ ಸಂಗ್ರಹ ಗಳು, ಸೆಲೆಬ್ರಿಟಿ ಸಂಗ್ರಹ, ವೈವಾಹಿಕ ಆಭರಣ, ಪಾರ್ಟಿ ಮತ್ತು ಲೈಟ್ವೇಯ್ಟ್ ಆಭರಣಗಳ ಸಂಗ್ರಹಗಳು ಈ ಪ್ರದರ್ಶನದಲ್ಲಿ ಎಲ್ಲರನ್ನು ಸೆಳೆಯಲಿದೆ. ಸೆ. 29ರಿಂದ ಅಕ್ಟೋಬರ್ 13ರ ವರೆಗೆ ವಜ್ರಾಭರಣ ಪ್ರದರ್ಶನ ಆಯೋಜಿಸಲಾಗಿದೆ.