ಉಡುಪಿ ಫೆಬ್ರವರಿ 27: ಕಳೆದ ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದ ಪುತ್ತೂರು ಗ್ರಾಮದ ಲಿಂಗೊಟ್ಟಿಗುಡ್ಡೆ ನಿವಾಸಿ ಸುರೇಶ್ ಪೂಜಾರಿ (54) ಎನ್ನುವ ವ್ಯಕ್ತಿಯು ಫೆಬ್ರವರಿ 21 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೊರಹೋಗಿದ್ದು ವಾಪಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
163 ಸೆಂ.ಮೀ ಎತ್ತರ, ಸಾಮಾನ್ಯ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಮಾತಾಡಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆ ಕಂಟ್ರೋಲ್ ರೂಂ ದೂ.ಸಂ:0820-2520444, ಎಸ್.ಡಿ.ಪಿ.ಒ ಸಂ:0820-2521257, ಡಿಪಿಒ ಸಂ:0820-2534777, ರೇಂಜ್ ಸಂ: 8242220501, ಚೀಫ್ ಆಫೀಸ್ ಸಂ:22212108 ಅನ್ನು ಸಂಪರ್ಕಿಸುವ೦ತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
















