ಉಡುಪಿ : ಕರ್ನಾಟಕ ಅಬಕಾರಿ ಕಾಯಿದೆ 1965 ರ ನಿಯಮ 15ಎ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ನಿರ್ಬಂಧಿಸಲಾಗಿದ್ದು, ರಾಜ್ಯ ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆಯದೇ ಹಾಲ್‍ಗಳಲ್ಲಿ, ಹೋಟೆಲ್‍ಗಳಲ್ಲಿ, ಗೆಸ್ಟ್‍ಹೌಸ್‍ಗಳಲ್ಲಿ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು ಮತ್ತು ಮದ್ಯಪಾನಕ್ಕೆ ಅನುವು ಮಾಡಿಕೊಡುವುದು ಅಬಕಾರಿ ಕಾಯಿದೆಯಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ರೀತಿ ಮದ್ಯಪಾನ ಮಾಡಿದಲ್ಲಿ ಅಥವಾ ಮದ್ಯಪಾನ ಮಾಡಲು ಅವಕಾಶ ನೀಡಿದಲ್ಲಿ ಸದರಿ ಕಾರ್ಯಕ್ರಮದ ಆಯೋಜಕರು/ ಕಟ್ಟಡ/ ಹಾಲ್ ಮಾಲೀಕರನ್ನು ಸಹ ಶಿಕ್ಷೆಗೆ ಒಳಪಡಿಸಲು ಅವಕಾಶವಿರುತ್ತದೆ.
ಡಿಸೆಂಬರ್-19 ರ ತಿಂಗಳಲ್ಲಿ ಕ್ರಿಸ್‍ಮಸ್ ಆಚರಣೆ ಮತ್ತು 2020 ನೇ ಹೊಸ ವರ್ಷಾಚರಣೆ ಮಾಡುವ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರು ಮದ್ಯ/ ಬಿಯರ್ ಸರಬರಾಜು ಮಾಡಲು ಉದ್ದೇಶಿಸಿದಲ್ಲಿ ಕಡ್ಡಾಯವಾಗಿ ಅಬಕಾರಿ ಇಲಾಖೆಯಿಂದ ನಿಯಮಾನುಸಾರ ಪರವಾನಿಗೆ (ಸಿಎಲ್-5 ಸನ್ನದು) ಪಡೆದುಕೊಂಡು ಮದ್ಯ ಸರಬರಾಜು ಮಾಡುವುದು. ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳದೇ, ಯಾವುದೇ ಕಾರ್ಯಕ್ರಮದಲ್ಲಿ ಮದ್ಯ/ ಬಿಯರ್ ವಿತರಿಸುವುದು ಕಂಡುಬಂದಲ್ಲಿ ಅಂತಹ ಕಾರ್ಯಕ್ರಮದ ಆಯೋಜಕರು/ ಕಟ್ಟಡದ ಮಾಲೀಕರ ವಿರುದ್ಧ ಅಬಕಾರಿ ಕಾನೂನಿನ ಉಲ್ಲಂಘನೆ ಸಂಬಂಧ ಮೊಕದ್ದಮೆ ದಾಖಲಿಸಿ, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರ ಪ್ರಕಟಣೆ ತಿಳಿಸಿದೆ.