ಉಡುಪಿ: ವಿದೇಶದಿಂದ ಉಡುಪಿಗೆ ಬಂದ ನಾಲ್ವರಲ್ಲಿ ಶಂಕಿತ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಹರೈನ್ ನಿಂದ ಬಂದ 48 ವರ್ಷದ ವ್ಯಕ್ತಿಗೆ ಹಾಗೂ ಸೌದಿಯಿಂದ ಮರಳಿದ 23 ವರ್ಷದ ಯುವತಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ, ಸೌದಿಯಿಂದ ಮರಳಿದ 32 ವರ್ಷದ ವ್ಯಕ್ತಿಗೆ ಕುಂದಾಪುರದ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ಆಸ್ಟ್ರೇಲಿಯಾದಿಂದ ಮರಳಿದ 66 ವರ್ಷದ ಮಹಿಳೆಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ರೋಗಿಗಳ ಗಂಟಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಾಳೆ ವರದಿ ಬರುವ ನಿರೀಕ್ಷೆ ಇದೆ ಎಂದು ಡಿಎಚ್ ಒ ತಿಳಿಸಿದ್ದಾರೆ.