ಉಡುಪಿ: ಕಾಮಿಡಿಯನ್ ರಾಕೇಶ್ ಪೂಜಾರಿ ಅಂತಿಮ ಯಾತ್ರೆ – ಹಲವು ನಟರು, ಅಭಿಮಾನಿಗಳಿಂದ ಅಂತಿಮ‌ ನಮನ

ಉಡುಪಿ: ನಿನ್ನೆ ರಾತ್ರಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದ ಹಾಸ್ಯ ನಟ ರಾಕೇಶ್ ಪೂಜಾರಿ ಮೃತದೇಹ ಕೆಮ್ಮಣ್ಣುವಿನ ಪಡುತೋನ್ಸೆಯ ಮನೆಗೆ ತಲುಪಿದೆ. ಮೃತ ಕಾಮಿಡಿ ಕಿಲಾಡಿ- 3ರ ವಿನ್ನರ್ ರಾಕೇಶ್ ಮನೆಗೆ ನೂರಾರು ಅಭಿಮಾನಿಗಳು, ಗ್ರಾಮಸ್ಥರು, ಕುಟುಂಬಸ್ಥರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಕಿರುತರೆ ನಟ ನಟಿಯರು, ರಾಕೇಶ್ ಆಪ್ತರು ಕೂಡ ಅಂತಿಮ ನಮನ ಸಲ್ಲಿಸಿದರು.

ತಾಯಿ ಶಾಂಭವಿ, ಸಹೋದರಿ ರಕ್ಷತಾ, ರಾಕೇಶ್ ಅವರ ಅಕಾಲಿಕ ಮರಣದಿಂದ ತೀವ್ರ ನೊಂದಿದ್ದು ಮನೆಯಲ್ಲಿ ಸೂತಕದ ವಾರಾವರಣ ನಿರ್ಮಾಣವಾಗಿದೆ. ನಟಿ ನಯನ, ಸೂರ್ಯ ಕುಂದಾಪುರ, ದೀಕ್ಷಿತ್ ಪ್ರವೀಣ್‌, ದೀಪಿಕಾ, ವಾಣಿ, ಉಮೇಶ್ ಕಿನ್ಮಾರ, ಸೂರಜ್, ಜೀ ಮೆಂಟ‌ರ್ ವಿಜಯ್ ಶೆಟ್ಟಿ ಮತ್ತಿತರ ಗಣ್ಯರು, ನಟರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಸದ್ಯ ಕೆಮ್ಮಣ್ಣುವಿನ ಮನೆಯಲ್ಲಿ ಮೃತದೇಹದ ಅಂತಿಮ ವಿಧಿವಿಧಾನ ನಡೆಯುತ್ತಿದ್ದು ಇಂದು ಸಂಜೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.