ಉಡುಪಿಯಲ್ಲಿ ಮೊದಲ ಬಾರಿಗೆ ನ.1 ಮತ್ತು 2ರಂದು “ಕೋಸ್ಟಲ್ ಟೆಕ್ ಕ್ರಿಕೆಟ್ ಲೀಗ್ – 2025”

ಉಡುಪಿ:ಉಡುಪಿ ಹಾಗೂ ಮಂಗಳೂರು ಪ್ರದೇಶದ ವಿವಿಧ ಐಟಿ ಕಂಪನಿಗಳ ನೌಕರರನ್ನು ಒಂದೇ ಅಂಕಣದಲ್ಲಿ ಒಗ್ಗೂಡಿಸುವ ಉದ್ದೇಶದಿಂದ, “ಯುನೈಟೆಡ್ ಟೆಕ್ ಕ್ರಿಕೆಟರ್ಸ್” ತಂಡದ ವತಿಯಿಂದ “ಕೋಸ್ಟಲ್ ಟೆಕ್ ಕ್ರಿಕೆಟ್ ಲೀಗ್ – 2025 ನ್ನು ನವೆಂಬರ್ 1 ಮತ್ತು 2ರಂದು ಹೆಜಮಾಡಿ ರಾಜೀವ್ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ವಿಶಿಷ್ಟ ಕ್ರಿಕೆಟ್ ಲೀಗ್‌, ಐ.ಟಿ ಕ್ಷೇತ್ರದ ನೌಕರರಿಗೆ ಕ್ರೀಡೆಯ ಮೂಲಕ ಪರಸ್ಪರ ಬಾಂಧವ್ಯವನ್ನು ಬೆಳೆಸುವಂತಾಗಲಿದೆ. ಆಟಗಾರರನ್ನು ಹರಾಜು (Auction) ಪದ್ಧತಿಯಲ್ಲಿ ಆಯ್ಕೆ ಮಾಡುವ ಮೂಲಕ ವ್ಯವಸ್ಥೆ ನಡೆದಿದೆ.

ಉಡುಪಿ ಮತ್ತು ಮಂಗಳೂರಿನ ವಿವಿಧ ಕಂಪನಿಗಳಿಂದ ಭಾಗವಹಿಸುವ ಐಟಿ ನೌಕರರು ಒಂದೇ ವೇದಿಕೆಯಲ್ಲಿ ಸ್ಪರ್ಧಿಸಲಿದ್ದಾರೆ. ತಂತ್ರಜ್ಞಾನ ಕ್ಷೇತ್ರದ ನೌಕರರು ಕ್ರೀಡೆಯ ಮೂಲಕ ಒಗ್ಗೂಡಲು ಮತ್ತು ಸಾಮಾಜಿಕ ಬಾಂಧವ್ಯವನ್ನು ವೃದ್ಧಿಸಲು ಈ ಲೀಗ್‌ ಹೊಸ ಹಾದಿ ತೆರೆದಿಡಲಿದೆ.