ಉಡುಪಿ, ಮೇ 02: ಉಡುಪಿ ಕುಕ್ಕಿಕಟ್ಟೆ ನಿವಾಸಿ ಸಿವಿಲ್ ಇಂಜಿನಿಯರ್ ರವಿರಾಜ್ ಉಡುಪ 57 ವರ್ಷ ತಮ್ಮ ಸ್ವಗ್ರಹದಲ್ಲಿ ಮೇ01 ರಂದು ಗುರುವಾರ ಹೃದಯಘಾತದಿಂದ ನಿಧನ ರಾದರು.
ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಉಡುಪಿ ಪರಿಸರದಲ್ಲಿ ನೂರಾರು ಮನೆ, ಕಟ್ಟಡಗಳನ್ನೂ ನಿರ್ಮಿಸಿ ಪ್ರಸಿದ್ದರಾಗಿದ್ದರು.
ಉಡುಪಿ ಸಿವಿಲ್ ಇಂಜಿನಿಯರ್ಸ್ ಸಂಸ್ಥೆಯ ನಿರ್ದೇಶಕರಾಗಿ ಸೇವೆ ನೀಡುತಿದ್ದರು, ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಕೆ.ರಂಜನ್ ಸಂತಾಪ ವ್ಯಕ್ತಪಡಿಸಿ ಶೃದ್ದಾಂಜಲಿ ಕೋರಿದ್ದಾರೆ.












