ಉಡುಪಿ: ಉಡುಪಿ ಕಥೋಲಿಕ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಇದರ 25 ನೇ ವರ್ಷದ ರಜತ ಸಂಭ್ರಮ ಸಮಾರಂಭ ವು ಡಿ18 ರವಿವಾರದಂದು ಶೋಕ ಮಾತಾ ಇಗರ್ಜಿಯ ಆವೆ ಮರಿಯಾ ಸಭಾಂಗಣದಲ್ಲಿ ನಡೆಯಿತು.
ಉಡುಪಿ ಕೆಥೋಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಡಾ| ಜೆರಾಲ್ಡ್ ಐಸಾಕ್ ಲೋಬೋ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ಮಾಡಿ ಮಾತನಾಡಿ, ವಿಶ್ವದ ಎಲ್ಲಾ ಕ್ಷೇತ್ರಗಳಿಗಿಂತಲೂ ಇಂದು ಬಲಿಷ್ಠವಾಗಿ ಬೆಳೆದಿರುವುದು ಸೇವಾ ಕ್ಷೇತ್ರ. ಇದಕ್ಕೆ ಸೇವಾ ಕ್ಷೇತ್ರದ ಗುಣಮಟ್ಟ ಕಾರಣ. ಸೇವಾ ಕ್ಷೇತ್ರದಲ್ಲಿ ವಸ್ತು ಅಥವಾ ಉತ್ಪನ್ನವನ್ನು ಕೈಯಲ್ಲಿ ಹಿಡಿದು ತೋರಿಸಲು ಸಾಧ್ಯವಿಲ್ಲ, ಆದರೆ ಸೇವಾ ಕ್ಷೇತ್ರದ ಮಾಪಕ ಅದರ ಶ್ರೇಷ್ಠತೆ ಮತ್ತು ಗುಣಮಟ್ಟವೇ ಆಗಿದೆ. ಉಡುಪಿ ಕಥೋಲಿಕ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯು ಕಳೆದ 25 ವರ್ಷಗಳಿಂದ ಇದೇ ಶ್ರೇಷ್ಠತೆ ಮತ್ತು ಗುಣಮಟ್ಟದ ಸೇವೆಯನ್ನು ನೀಡುತ್ತಾ ಬಂದಿದ್ದು ದಿನೇ ದಿನೇ ಹೆಚ್ಚುತ್ತಿರುವ ಅದರ ಬೆಳವಣಿಗೆಯೆ ಇದಕ್ಕೆ ಸಾಕ್ಷಿ ಎಂದರು.
ದಕ್ಷ ಆಡಳಿತ, ಸಮರ್ಪಿತ ಸಿಬ್ಬಂದಿ ಹಾಗೂ ಸದಸ್ಯರು ಸಹಕಾರಿ ಕ್ಷೇತ್ರದ ಮೂರು ಆಧಾರ ಸ್ಥಂಭಗಳು. ಈ ಸ್ಥಂಭಗಳ ಮೇಲೆ ನಿಂತಿರುವ ಸಂಸ್ಥೆಯು ಬಲಿಷ್ಠವಾಗಿ ಬೆಳೆದಿದೆ. ಉನ್ನತ ಆದರ್ಶ ಮತ್ತು ಧ್ಯೇಯದಿಂದಾಗಿ ಪುಟ್ಟದಾಗಿ ಪ್ರಾರಂಭವಾದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಸಂಸ್ಥೆಯು ಸಾಮಾಜಿಕ ಕಳಕಳಿಯ ಹಲವಾರು ಕಾರ್ಯಗಳನ್ನೂ ಮಾಡುತ್ತಾ ಬಂದಿದ್ದು, ಮುಂದೆಯೂ ಸಮಾಜದ ಉನ್ನತಿಗಾಗಿ ದುಡಿಯಲಿ. ಸಮರ್ಪಿತ ಸಿಬ್ಬಂದಿಗಳ ಕಾರ್ಯಕ್ಷಮತೆಯಿಂದಾಗಿ ಸೊಸೈಟಿಯು ಪ್ರಗತಿಯನ್ನು ಸಾಧಿಸಿದ್ದು ಜನರ ಅಚ್ಚುಮೆಚ್ಚಿನ ಸಂಸ್ಥೆ ಎನಿಸಿಕೊಂಡಿದೆ. ಬೆಳ್ಳಿ ಬಂಗಾರವಾಗಲಿ ಕಂಡ ಕನಸುಗಳೆಲ್ಲಾ ನನಸಾಗಲಿ ಸಂಸ್ಥೆಯಿಂದ ಸಮಾಜಮುಖಿ ಕಾರ್ಯಗಲು ನಡೆಯಲಿ ಎಂದು ವರು ಶುಭಹಾರೈಸಿದರು.
ಉಡುಪಿ ಕಥೋಲಿಕ್ ಕ್ರೆ.ಕೋ.ಸೊ ಅಧ್ಯಕ್ಷ ಅಲೋಶಿಯಸ್ ಡಿ’ ಅಲ್ಮೇಡಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಫಾ| ವಲೇರಿಯನ್ ಮೆಂಡೋನ್ಸಾ ರೆಕ್ಟರ್, ಮಿಲಾಗ್ರಿಸ್ ಕೆಥೆದ್ರಲ್, ಕಲ್ಯಾಣಪುರ, ಉಡುಪಿ, ಫಾ| ಚಾರ್ಲ್ಸ್ ಮಿನೇಜಸ್ ಧರ್ಮ ಗುರುಗಳು, ಶೋಕಮಾತಾ ಇಗರ್ಜಿ, ಬಿ. ಜಯಕರ ಶೆಟ್ಟಿ, ಇಂದ್ರಾಳಿ ಅಧ್ಯಕ್ಷರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್,
ಶ್ರೀಮತಿ ಮೇರಿ ಡಿಸೋಜ ಅಧ್ಯಕ್ಷರು, ಕಥೋಲಿಕ್ ಸಭಾ ಉಡುಪಿ ಪ್ರದೇಶ, ಉಡುಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪಾಧ್ಯಕ್ಷ ಲೂವಿಸ್ ಲೋಬೊ, ಆಡಳಿತ ಮಂಡಳಿ ನಿರ್ದೇಶಕ ಇಗ್ನೇಷಿಯಸ್ ಮೋನಿಸ್, ಫ್ರಾಂಕ್ಲಿನ್ ಮಿನೇಜಸ್, ಫೆಲಿಕ್ಸ್ ಪಿಂಟೋ, ಜೇಮ್ಸ್ ಡಿ’ಸೋಜ, ಪರ್ಸಿ ಜೆ. ಡಿ’ಸೋಜ, ಆರ್ಚಿಬಾಲ್ಡ್ ಎಸ್. ಡಿ’ಸೋಜ, ಕೇವಿನ್ ಆರ್ .ಪಿರೇರಾ, ಶ್ರೀಮತಿ ಜೆಸಿಂತಾ ಡಿ’ಸೋಜ, ಗಿಲ್ಬರ್ಟ್ ಫೆರ್ನಾಂಡೀಸ್, ಡಾ| ನೇರಿ ಕರ್ನೇಲಿಯೋ, ಶ್ರೀಮತಿ ಲೋಯ್ಸೆಟ್ ಜೆ. ಕರ್ನೇಲಿಯೋ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೆಥೋಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಡಾ| ಜೆರಾಲ್ಡ್ ಐಸಾಕ್ ಲೋಬೋ ಹಾಗೂ ಸೊಸೈಟಿಯ ಸ್ಥಾಪಕಾಧ್ಯಕ್ಷರು ಮತ್ತು ಸಂಸ್ಥೆಗಾಗಿ ದುಡಿದವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಯುವ ಸಿಬ್ಬಂಡಿ ವರ್ಗದವರು ಪ್ರಾರ್ಥಿಸಿದರು. ಸೈಂಟ್ ಮೇರಿಸ್ ಪ್ರೌಢ ಶಾಲೆಯ ಮಕ್ಕಳಿಂದ ಸ್ವಾಗತ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಅಲೋಶಿಯಸ್ ಡಿ’ ಅಲ್ಮೇಡಾ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಸಂದೀಪ್ ಎ. ಫೆರ್ನಾಂಡೀಸ್ ಪ್ರಧಾನ ವ್ಯವಸ್ಥಾಪಕ ಸಂದೀಪ್ ಎ. ಫೆರ್ನಾಂಡೀಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಕಲ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.