ಪೂರ್ವ ಸ್ವಾಮ್ಯದ ವಾಹನ ಮಾರಾಟಗಾರರ ಸಂಘದ ಅಧ್ಯಕ್ಷರಾಗಿ ಉಡುಪಿ ಕಾರ್ಸ್ ಮಾಲಕ ಮೊಹಮ್ಮದ್ ಅಶ್ರಫ್ ಆಯ್ಕೆ

ಉಡುಪಿ: ಇಲ್ಲಿನ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಸೆಪ್ಟೆಂಬರ್ 18 ಭಾನುವಾರದಂದು ಪೂರ್ವ ಸ್ವಾಮ್ಯದ ವಾಹನ ಮಾರಾಟಗಾರರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಸಂಘದ ನೂತನ ಅಧ್ಯಕ್ಷರಾಗಿ ಪೂರ್ವ ಸ್ವಾಮ್ಯದ ವಾಹನ ಮಾರಾಟಗಾರರ ಸಂಘದ ಸ್ಥಾಪಕಾಧ್ಯಕ್ಷ ಮತ್ತು ಉಡುಪಿ ಕಾರ್ಸ್ ಮಾಲಕ ಮೊಹಮ್ಮದ್ ಅಶ್ರಫ್ ಆಯ್ಕೆಯಾಗಿದ್ದಾರೆ.

ಸಂಘದ ಗೌರವಾಧ್ಯಕ್ಷರಾಗಿ ಸದಾಶಿವ ಶೆಟ್ಟಿ, ಸಲಹೆಗಾರರಾಗಿ: ವಸಂತ ಕುಮಾರ್ ಉಡುಪಿ, ಪದ್ಮನಾಭ ಜತ್ತನ್ನ ( ಅನ್ನು) ,ಪೌಲ್ ಸಿಜು, ಉಪಾಧ್ಯಕ್ಷರಾಗಿ ವಲೇರಿಯನ್ ಪೈಸ್, ಮೂದಸರ್ ಕುಂದಾಪುರ, ಪ್ರಧಾನ ಕಾರ್ಯದರ್ಶಿಯಾಗಿ ಉದಯ ಕಿರಣ್ ಮಣಿಪಾಲ ಮೋಟಾರ್ಸ್, ಜೊತೆ ಕಾರ್ಯದರ್ಶಿಗಳಾಗಿ ನಿತಿನ್ ಕುಂದಾಪುರ, ಪ್ರಶಾಂತ್ ಮಣಿಪಾಲ, ಗಿರೀಶ್ ಮಣಿಪಾಲ, ಕೋಶಾಧಿಕಾರಿಯಾಗಿ ಸಜಿ ಪಿಳ್ಳೆ, ಸಂಘಟನಾ ಕಾರ್ಯದರ್ಶಿಯಾಗಿ ನವೀನ್ ಉದ್ಯಾವರ, ಶಾರಿಕ್ ಹಿರಯಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಆಲ್ವಿನ್ ಪಿಂಟೋ, ಶಶಿಧರ್ ಶೆಟ್ಟಿ ಹಾಗೂ ಸದಸ್ಯರಾಗಿ ರಾಮಕೃಷ್ಣ, ರಾಗು ಮಣಿಪಾಲ ಆಯ್ಕೆಯಾಗಿದ್ದಾರೆ.

ಮೋಹದಾಸ್ ಶೆಟ್ಟಿ ಪದಾಧಿಕಾರಿಗಳ ಆಯ್ಕೆಯನ್ನು ನೆರವೇರಿಸಿದರು.

ಉದಯ ಕಿರಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಲ್ವಿನ್ ಪಿಂಟೋ, ಪ್ರಶಾಂತ್ ಕುಮಾರ್ ವಂದಿಸಿದರು. ರಾಝಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.