ಉಡುಪಿ: ಉಪೇಂದ್ರ ಪೈ ಮೆಮೊರಿಯಲ್ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ; ವಿ ರೀಚ್ ಅಕಾಡೆಮಿ ಉಡುಪಿಯೊಂದಿಗೆ ಒಡಂಬಡಿಕೆ

ಉಡುಪಿ: ಉಪೇಂದ್ರ ಪೈ ಮೆಮೊರಿಯಲ್ ಕಾಲೇಜು (ಯುಪಿಎಂಸಿ), ಉಡುಪಿ ವತಿಯಿಂದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ವಿಶೇಷ “Career Counselling” ಕಾರ್ಯಕ್ರಮವು ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೊರಿಯಲ್ ಕಾಲೇಜು ಕ್ಯಾಂಪಸ್‌ನಲ್ಲಿ ಏಪ್ರಿಲ್ 18 ರಂದು ನಡೆಯಿತು.

ಕಾಲೇಜಿನಲ್ಲಿ ಪಿಯುಸಿ ತೇರ್ಗಡೆಯಾಗಿ ಪದವಿ ಶಿಕ್ಷಣದ ಜೊತೆಗೆ ವೃತ್ತಿಪರ ಕೋರ್ಸ್ ಗಳಿಗೆ ಎದುರು ನೋಡುತ್ತಿರುವ ವಿದ್ಯಾರ್ಥಿಗಳಿಗೋಸ್ಕರ ಕಾಲೇಜಿನ ಐಕ್ಯೂಎಸಿ ಮತ್ತು ವೃತ್ತಿ ಮಾರ್ಗದರ್ಶನ ಘಟಕದ ವತಿಯಿಂದ ವಿ ರೀಚ್ ಅಕಾಡೆಮಿ ಉಡುಪಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಿಎ, ಸಿಎಸ್ ಹಾಗೂ ಸಿಎಂಎ ಕೋರ್ಸ್ ಗಳ ಕುರಿತು ಮಾಹಿತಿಯನ್ನು ಈ ಕಾರ್ಯಕ್ರಮದಲ್ಲಿ ನೀಡಲಾಯಿತು.

ವಿ ರೀಚ್ ಅಕಾಡೆಮಿ ಉಡುಪಿ ಸ್ಥಾಪಕರಾದ ಸಂತೋಷ್ ಪ್ರಭು ಮಾತನಾಡಿ, Chartered Accountancy (CA), Company Secretary (CS) ಮತ್ತು Cost and Management Accounting (CMA) ಕ್ಷೇತ್ರಗಳಲ್ಲಿ ಅಪಾರವಾದ ವೃತ್ತಿ ಅವಕಾಶಗಳಿವೆ. ಆದರೆ ಈ ಅವಕಾಶಗಳನ್ನು ಪಡೆಯಲು ವಿದ್ಯಾರ್ಥಿಗಳು ತಯಾರಿ ನಡೆಸುವುದು ತುಂಬಾ ಮುಖ್ಯ ಎಂದರು. ಆಸಕ್ತಿ, ಶ್ರದ್ಧೆ ಮತ್ತು ಬದ್ಧತೆ ಅತೀ ಮುಖ್ಯವಾಗಿರುತ್ತದೆ, ಈ ತರದ ಕೋರ್ಸ್ ಕಲಿತು ತೇರ್ಗಡೆ ಹೊಂದಿದವರಿಗೆ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಉದ್ಯೋಗ ಅವಕಾಶಗಳು ಸಿಗುತ್ತವೆ ಎಂದರು.

ವೃತ್ತಿಪರ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಗಳಿಸಿಕೊಳ್ಳುವುದು ಅಗತ್ಯ, ಇದೀಗ ಉಪೇಂದ್ರ ಪೈ ಮೆಮೊರಿಯಲ್ ಕಾಲೇಜು (ಯುಪಿಎಂಸಿ), ಪ್ರೊಫೆಶನಲ್ ಕೋರ್ಸ್ ಗಳಿಗೆ ಬೆಂಬಲ ಕೊಡುತ್ತಿದೆ. ಎಂದರು.

ಕಠಿಣ ಶ್ರಮದಿಂದ ಅದ್ಬುತ ಉದ್ಯೋಗ ಗಳಿಸಬಹುದು: ಡಾ. ಎಸ್. ಎಸ್ ಪಾಬ್ಲಾ

ಮಣಿಪಾಲದ ಸ್ಕಿಲ್ ಡೆವೆಲಪ್ಮೆಂಟ್ ಸೆಂಟರ್ ನ ಮುಖ್ಯಸ್ಥರಾದ ಬ್ರಿಗೇಡಿಯರ್ ಡಾ. ಎಸ್. ಎಸ್ ಪಾಬ್ಲಾ ಅಧ್ಯಕ್ಷತೆ ವಹಿಸಿ, ಮಾತನಾಡಿ, ಒಳ್ಳೆಯ ಅಂಕದಿಂದ ಪದವಿಯನ್ನು ಮೊದಲು ಮುಗಿಸಿಕೊಳ್ಳಿ, ಮುಂದೆ ಯಾವ ಕ್ಷೇತ್ರದಲ್ಲಿ ಕಾರ್ಯನಿರ್ಹಿಸುತ್ತೀರಿ ಎನ್ನುವುದು ನಿಮ್ಮ ಆಯ್ಕೆಗೆ ಬಿಟ್ಟದ್ದು, ನಿಮ್ಮ ಯೋಚನೆಗಳನ್ನು ಕಾಲೇಜು ಇನ್ನಷ್ಟು ಬೆಳೆಸುತ್ತದೆ. ಎಲ್ಲದಕ್ಕೂ ಬೇಕಾಗಿದ್ದು ಕಠಿಣ ಪರಿಶ್ರಮ ಎಂದರು. ವಿ ರೀಚ್ ಅಕಾಡೆಮೆ V Reach Academy ವೃತ್ತಿ ಅವಕಾಶಗಳ ಕುರಿತು ಸಮಗ್ರ ಮಾಹಿತಿ ನೀಡುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ ಎಂದರು.

ಕಾಲೇಜಿನ ನಿರ್ದೇಶಕರಾದ ಆಶಾ ಕುಮಾರಿ, ಪ್ರಾಚಾರ್ಯರಾದ ಪ್ರಭಾ ಕಾಮತ್ ಉಪಸ್ಥಿತರಿದ್ದರು. ಕಾಲೇಜಿನ ಉದ್ಯೋಗ ಹಾಗೂ ಪ್ರವೇಶಾತಿಯ ನಿರ್ದೇಶಕರಾದ ಡಾ. ಪದ್ಮಲತಾ ಪ್ರಸ್ತಾವನೆಗೈದು, ಸ್ವಾಗತಿಸಿದರು.

ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಮುಖ್ಯಸ್ಥೆ ಸಹನಾ ಎಂ. ಜಿ ಕಂಪ್ಯೂಟರ್ ಆಧಾರಿತ ಸ್ಕಿಲ್ ಡಿಪ್ಲೊಮಾಗಳ ಬಗ್ಗೆ ಮಾಹಿತಿ ನೀಡಿ, ಕಾರ್ಯಕ್ರಮ ನಿರೂಪಿಸಿದರು.