ಉಡುಪಿ: ಕೆನರಾ ಬ್ಯಾಂಕ್ ಸಿ.ಎಸ್.ಆರ್ ನಿಧಿಯಿಂದ ವಿಜೇತ ವಿಶೇಷ ಶಾಲೆಯ ವಸತಿ ನಿಲಯದ ಮಕ್ಕಳಿಗೆ ಅವಶ್ಯಕವಿರುವ 15 ಕಾಟ್ ಹಾಗೂ ಬೆಡ್ ಗಳನ್ನು ಕೆನರಾ ಬ್ಯಾಂಕ್ ಬೆಂಗಳೂರು ಪ್ರಧಾನ ಕಚೇರಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮಣಿ ಮೇಕಲೈ ಇಂದು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಪ್ರಧಾನ ಕಚೇರಿಯ ಜನರಲ್ ಮ್ಯಾನೇಜರ್ ರಾಕೇಶ್ ಕಶ್ಯಪ್, ಮಂಗಳೂರು ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಯೋಗೀಶ್ ಆಚಾರ್ಯ, ವೃತ್ತ ಕಚೇರಿ ಮಣಿಪಾಲದ ಜನರಲ್ ಮ್ಯಾನೇಜರ್ ರಾಮ ನಾಯ್ಕ್, ಡಿಜಿಎಂ ಪ್ರದೀಪ್ ಭಕ್ತ, ಉಡುಪಿ ರೀಜನಲ್ ಮ್ಯಾನೇಜರ್ ಕೆ. ಕಾಳಿ, ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕ ರುದ್ರೇಶ್ ಡಿ.
ಕಾರ್ಕಳ ಎಜಿಎಂ ಉಮೇಶ್ ಶೆಣೈ, ಕಾರ್ಕಳ ಮುಖ್ಯ ಪ್ರಬಂಧಕ ಶ್ರೀಹರಿ ಭಟ್, ಮಣಿಪಾಲ ಸಿಂಡ್ ಗ್ರಾಮೀಣ ಸ್ವಉದ್ಯೋಗ ಸಂಸ್ಥೆಯ ನಿರ್ದೇಶಕ ಮಂಜುನಾಥ್ ನಾಯಕ್, ಉದ್ಯಮಿ ಮಂಜುನಾಥ್, ದುರ್ಗಾ ವಿದ್ಯಾ ಸಂಘದ ಸಂಚಾಲಕ ರಾಧಾಕೃಷ್ಣ ಶೆಟ್ಟಿ, ಶಾಲಾ ಅಧ್ಯಕ್ಷ ರತ್ನಾಕರ್ ಅಮೀನ್, ಟ್ರಸ್ಟಿ ಸಂತೋಷ್ ನಾಯಕ್, ಕಿರಣ್ ಶೆಟ್ಟಿ, ಹರೀಶ್ ಹಾಗೂ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಉಪಸಿತರಿದ್ದರು. ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.












