ಉಡುಪಿ: ನಾಳೆ (ನ. 29) ಕುಂಜಿಬೆಟ್ಟುವಿನಲ್ಲಿ ‘ಬಿಸಿನೆಸ್ ಬೇ ಸೆಂಟರ್’ ಕಾಂಪ್ಲೆಕ್ಸ್ ಉದ್ಘಾಟನೆ

ಉಡುಪಿ: ಇಲ್ಲಿನ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪ ಜಂಕ್ಷನ್ ಬಳಿ ನೂತನವಾಗಿ ನಿರ್ಮಾಣಗೊಂಡ ಬಹು ಅಂತಸ್ತಿನ ‘ಬಿಸಿನೆಸ್ ಬೇ ಸೆಂಟರ್’ ಕಾಂಪ್ಲೆಕ್ಸ್ ನಾಳೆ (ನ. 29) ಶುಭಾರಂಭಗೊಳ್ಳಲಿದೆ.

ಉಡುಪಿ ಶಾಸಕ ಕೆ. ರಘುಪತಿ ಭಟ್ ಬೆಳಿಗ್ಗೆ 11 ಗಂಟೆಗೆ ಕಾಂಪ್ಲೆಕ್ಸ್ ಅನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಉಜ್ವಲ್ ಡೆವಲಪರ್ಸ್ ನ ಪಿ. ಪುರುಷೋತ್ತಮ ಶೆಟ್ಟಿ, ಕ್ರೆಡೈ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್, ನಿವೃತ್ತ ಪೊಲೀಸ್ ಅಧಿಕಾರಿ ಎಂ.ಐ. ಜಮೀಲ್, ಮಂಗಳೂರು ಅಕ್ಸಾ ಫಾರ್ಮಾಸೆಟಿಕಲ್ಸ್ ಪ್ರೊಪರೈಟರ್ ಎಂ.ಎಸ್. ಅಬಿದ್ ಹುಸೇನ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಬಿಸಿನೆಸ್ ಬೇ ಡೆವಲಪರ್ಸ್ ಪ್ರೊಪರೈಟರ್ ಎಂ.ಎಸ್. ಅಫ್ಸಲ್ ಹುಸೈನ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಇ ಮೇಲ್ ([email protected]) ಅಥವಾ ಮೊಬೈಲ್ ಸಂಖ್ಯೆ 97415 51188 ಸಂಪರ್ಕಿಸಬಹುದು.