ಉಡುಪಿ:ಸೆ.27, 28 ರಂದು ಬಿಲ್ಲಾಡಿ ದಸರಾ ವೈಭವ-2025 ಲಾಂಛನ ಬಿಡುಗಡೆ

ಬ್ರಹ್ಮಾವರ: ಸಾರ್ವಜನಿಕ ಶಾರದೋತ್ಸವ ಸಮಿತಿ ಬಿಲ್ಲಾಡಿ ಹಾಗೂ ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ನೇತ್ರತ್ವದಲ್ಲಿ ಸಪ್ಟೆಂಬರ್ 27, 28 ರಂದು ನಡೆಯುವ ಭಕ್ತಿ ಭಾವ ಬಣ್ಣಗಳ ವೈಭವ ಬಿಲ್ಲಾಡಿ ದಸರಾ -2025 ಕಾರ್ಯಕ್ರಮದ ಅಂಗವಾಗಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಲಿ ಅಧಿಕೃತ ಲಾಂಛನವನ್ನು ಬಿಡುಗಡೆಗೊಳಿಸಿದರು.

ಸುಮಾರು 9 ವರ್ಷಗಳಿಂದ ಬಿಲ್ಲಾಡಿಯಲ್ಲಿ ಯುವಕ -ಯುವತಿಯರು ಊರಿನ ಹಿರಿಯೊಂದಿಗೆ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿರುವ ಬಿಲ್ಲಾಡಿ-ದಸರಾ ಊರ ಹಬ್ಬವಾಗಿ ವೈಭಯುತವಾಗಿ ನಡೆಯಲಿ ಎಂದು ಶಾಸಕರು ಶುಭ ಹಾರೈಸಿದರು.

ಬಿಲ್ಲಾಡಿ ದಸರಾ ಸ್ಥಾಪಕ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ದಸರಾ 2025 ರ ಅಧ್ಯಕ್ಷ ಚಂದ್ರಕಾಂತ ಕೊಠಾರಿ, ಯುವ ಉದ್ಯಮಿ ಪ್ರಿಯದರ್ಶನ್ ಶೆಟ್ಟಿ ಬಿಲ್ಲಾಡಿ, ರಾಘವ್ ಮೆಂಡನ್ ಬಿಲ್ಲಾಡಿ, ಬಿಲ್ಲಾಡಿ ಫ್ರೆಂಡ್ಸ್ ಅಧ್ಯಕ್ಷ ಪ್ರತಾಪ್‌ ಶೆಟ್ಟಿ ಅರಾಡಿ ಉಪಸ್ಥಿತರಿದ್ದರು.