ಉಡುಪಿ: ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಗೋಪೂಜೆ

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಇಂದ್ರಾಳಿಯ ಜಲಜಾ ಆಚಾರ್ತಿ ಅವರ ಮನೆಯಲ್ಲಿ ಗೋಪೂಜೆ ನಡೆಯಿತು.
ಗೋವುಗಳಿಗೆ ನವಧಾನ್ಯಗಳನ್ನು ನೀಡಿ ಆರತಿ ಬೆಳಗಿ, ಗೋಪೂಜೆಯನ್ನು ನಡೆಸಿಕೊಟ್ಟರು. ಮಹಿಳಾಮೋರ್ಚಾ ವತಿಯಿಂದ ಗೋವು ಪಾಲಕರಿಗೆ, ಗೋವುಗಳಿಗಾಗಿ ಪಶುಆಹಾರ ಮತ್ತು ಗೋಕಾಣಿಕೆಯನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಬಿಜೆಪಿಯ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಹಾಗೂ ಜಿ.ಪಂ.ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ನಯನಾ ಗಣೇಶ್, ತಾ.ಪಂ.ನ ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ್, ಜಿಲ್ಲಾ ಮ.ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ವೀಣಾ.ಎಸ್.ಶೆಟ್ಟಿ ಮತ್ತು ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಭಾರತಿ ಚಂದ್ರಶೇಖರ, ಪ್ರಮೀಳಾ, ವೀಣಾ ನಾಯಕ್, ಸುಮಾ.ಯು.ಶೆಟ್ಟಿ, ರಜನಿ ಹೆಬ್ಬಾರ್, ಸುಮಿತ್ರ ನಾಯಕ್, ಕಲ್ಪನ ಸುಧಾಮ, ಹಿರಿಯರಾದ ರತಿ ಶೆಟ್ಟಿ, ನೀರಜಾ ಶೆಟ್ಟಿ, ಶಶಿಕಲಾ, ತಾರ ಆಚಾರ್ಯ, ಸರೋಜ, ರಂಜನಿ ವಸಂತ್ , ರೋಹಿಣಿ, ದಯಾಶಿಣಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.