ಉಡುಪಿ: ಬಿಲ್ಲಾಡಿ ಆತ್ಮಾನಂದ ಸರಸ್ವತಿ ಐಟಿಐ ಕಾಲೇಜು ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಡಿಮೋನ್ ನೈಟ್ಸ್ ತಂಡ ಟ್ರೋಫಿ ಪಡೆದುಕೊಂಡಿತು.
ಪಂದ್ಯಾವಳಿಯಲ್ಲಿ ವಿವಿಧ ಐಟಿಐ ಶಿಕ್ಷಣ ಸಂಸ್ಥೆಗಳ 7 ತಂಡಗಳು ಭಾಗವಹಿಸಿದ್ದವು. ಫೈನಲ್ನಲ್ಲಿ ಅಂತಿಮವಾಗಿ ಆತ್ಮಾನಂದ ಸರಸ್ವತಿ ಐಟಿಐ ಕಾಲೇಜಿನ ಪ್ರಸ್ತುತ ವಿದ್ಯಾರ್ಥಿಗಳ ತಂಡ ಮಂದಾರ್ತಿ ಫ್ರೆಂಡ್ಸ್, ಇದೇ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ತಂಡ ಡಿಮೋನ್ ನೈಟ್ಸ್ ತಂಡವು ಹಣಾಹಣಿ ನಡೆಸಿ ಡಿಮೋನ್ ನೈಟ್ಸ್ ಗೆಲುವಿನ ನಗೆ ಬೀರಿತು.
ಮಂದಾರ್ತಿ ಫ್ರೆಂಡ್ಸ್ ರನ್ನರ್ಅಪ್ ಪ್ರಶಸ್ತಿ ಪಡೆದುಕೊಂಡಿತು.
ಬಿಲ್ಲಾಡಿ ಗ್ರಾ.ಪಂ. ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಪಂದ್ಯಾವಳಿ ಉದ್ಘಾಟಿಸಿ ಶುಭಹಾರೈಸಿದರು. ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಉಡುಪಿ ಸಮಿತಿ ಎಜ್ಯೂಕೇಶನಲ್ ಟ್ರಸ್ಟ್ನ ಕಾರ್ಯಾಧ್ಯಕ್ಷ ಬನ್ನಂಜೆ ಬಾಬು ಅಮೀನ್ ಅಧ್ಯಕ್ಷತೆ ವಹಿಸಿದ್ದರು.
ಉದ್ಘಾಟನೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಾಂತಾ ಇಲೆಕ್ಟ್ರಿಕಲ್ಸ್ ಎಂ.ಡಿ. ಶ್ರೀಪತಿ ಭಟ್, ಕೋಟ ರೋಟರಿ ಕ್ಲಬ್ ಪ್ರಮುಖರಾದ ಶ್ರೀಕಾಂತ್ ಶೆಣೈ, ಸ್ಥಳೀಯ ಉದ್ಯಮಿ ಮಂಜುನಾಥ ಪೂಜಾರಿ ಇದ್ದರು.
ಕಾಲೇಜಿನ ಪ್ರಾಂಶುಪಾಲ ರೂಪೇಶ್ ಕುಮಾರ್ ಸ್ವಾಗತಿಸಿದರು. ಟ್ರಸ್ಟ್ನ ಕಾರ್ಯದರ್ಶಿ ಮಹೇಶ್ ಕುಮಾರ್ ಎಂ. ಕಾರ್ಯಕ್ರಮ ನಿರ್ವಹಿಸಿದರು.
ಸಮರೋಪದಲ್ಲಿ ಬನ್ನಂಜೆ ಬಾಬು ಅಮೀನ್, ನವೀನ್ ಪೂಜಾರಿ, ಮಂಜುನಾಥ್ ಪೂಜಾರಿ ಉಪಸ್ಥಿತಿಯಲ್ಲಿ ಪ್ರಶಸ್ತಿ ವಿತರಿಸಲಾಯಿತು. ಪಂದ್ಯಾಟದ ರೆಫ್ರಿಯಾಗಿ ಉದಯ ಪೂಜಾರಿ, ರಂಜಿತ್ ಪೂಜಾರಿ, ವೀಕ್ಷಕ ವಿವರಣೆಯನ್ನು ಅಶೋಕ್ ಪೂಜಾರಿ ನಿರ್ವಹಿಸಿದರು.