ಈ ಸಂಸ್ಥೆಗೆ 2021 ನೇ ಸಾಲಿಗೆ ಆಯ್ಕೆಯಾದ ಉಡುಪಿಯ ವಿದ್ಯಾರ್ಥಿನಿ
ಉಡುಪಿ ಬೇಸ್ ಕೋಚಿಂಗ್ ಸಂಸ್ಥೆಯ ವಿದ್ಯಾರ್ಥಿನಿ ಭಾರ್ಗವಿ ಬೋರ್ಕರ್ ಅವರು ಪುಣೆಯ ಆರ್ಮಡ್ ಪೋರ್ಸ್ ಮೆಡಿಕಲ್ ಕಾಲೇಜ್ (ಎಎಫ್ಎಂಸಿ) ಗೆ ಆಯ್ಕೆಯಾಗಿದ್ದಾರೆ.
ಈ ಸಂಸ್ಥೆಗೆ ಆಯ್ಕೆಯಾದವರಲ್ಲಿ ಭಾರ್ಗವಿ ಅವರು ಕರ್ನಾಟಕದ ಮೂವರು ವಿದ್ಯಾರ್ಥಿನಿಯರ ಪೈಕಿ ಒಬ್ಬಳಾಗಿದ್ದು, ಭಾರತದ ಮೂವತ್ತು ವಿದ್ಯಾರ್ಥಿನಿಯರಲ್ಲಿ ಭಾರ್ಗವಿ ಒಬ್ಬರಾಗಿದ್ದಾರೆ.
ಪುಣೆಯ ಎಎಫ್ ಎಂಸಿ ಸಂಸ್ಥೆ ದೇಶಾದ್ಯಂತ ವರ್ಷಕ್ಕೆ ಮೂವತ್ತು ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ಕರ್ನಾಟಕದಿಂದ ಮೂವರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ಅದರಲ್ಲಿ ಭಾರ್ಗವಿ ಬೋರ್ಕರ್ ಅವರು ಒಬ್ಬರಾಗಿದ್ದಾರೆ. ಈ ಸಂಸ್ಥೆಯು ನೀಟ್ ನಲ್ಲಿ ಪಡೆದ ಅಂಕ ಹಾಗೂ ನೇರ ಸಂದರ್ಶನದ ಅಂಕದ ಮೇರೆಗೆ ಆಯ್ಕೆ ಮಾಡಿಕೊಳ್ಳುತ್ತದೆ.
ಭಾರ್ಗವಿ ಅವರು ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ 644 ಅಂಕಗಳನ್ನು ಪಡೆದು ನಂತರ ಎಎಫ್ಎಂಸಿಯ ಸಂದರ್ಶನದಲ್ಲಿಯೂ ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿ ಆಯ್ಕೆಯಾಗಿದ್ದಾರೆ.
ನಮ್ಮ ಬೇಸ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿ ಭಾರ್ಗವಿ, ಈ ಸಾಧನೆ ಗೈದಿರುವುದು ನಮ್ಮ ಸಂಸ್ಥೆಗೆ ಅತ್ಯಂತ ಹೆಮ್ಮೆಯ ಸಂಗತಿ ಎಂದು ಎಂದು ಬೇಸ್ ಉಡುಪಿ ಸಂಸ್ಥೆಯ ಸೆಂಟರ್ ಹೆಡ್ ಶ್ರೀಕರ್ ಸಂತಸ ವ್ಯಕ್ತಪಡಿಸಿದ್ದಾರೆ.
ಭಾರ್ಗವಿ ನಮ್ಮ ಸಂಸ್ಥೆಯಲ್ಲಿ ನೀಟ್ ಪರೀಕ್ಷೆಗೆ – ಮೆಡಿಕಲ್ ಎಕ್ಸೆಲ್ ವಿಭಾಗದಲ್ಲಿ ಕೋಚಿಂಗ್ ಪಡೆದುಕೊಳ್ಳುತ್ತಿದ್ದಳು ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು 0820 2522449