ಉಡುಪಿ: ಭಾರತ್ ಬಿಲ್ಡರ್ಸ್ ಮಾಲೀಕ ನಿಧನ

ಉಡುಪಿ: ಇಲ್ಲಿನ ರಥಬೀದಿಯಲ್ಲಿರುವ ಭಾರತ್ ಬಿಲ್ಡರ್ಸ್‍ನ ಮಾಲೀಕ ಪ್ರಪುಲ್ಲಾಚ್ಚಂದ್ರ ಅವರು ಹೃದಯಾಘಾತದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು.

ಪ್ರಪುಲ್ಲಾಚ್ಚಂದ್ರ ಅವರು ಇಂದು ಬೆಳಿಗ್ಗೆ 4 ಸುಮಾರಿಗೆ ರಕ್ತದೊತ್ತಡ್ಡ ಕಡಿಮೆಯಾಗಿ ಮನೆಯಲ್ಲಿ ಕುಸಿದು ಬಿದ್ದಿದ್ದರು, ತಕ್ಷಣ ಮನೆಯವರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.