ಉಡುಪಿ: ಬಾವಿಯಲ್ಲಿ ಶವ ಪತ್ತೆ

ಉಡುಪಿ, ಜೂ.18: ಬನ್ನಂಜೆಯ ಗೋವಿಂದ ಆಚಾರ್ಯ ಮಾರ್ಗದ ಗರಡಿ ಸನಿಹದ ಖಾಸಗಿಯವರ ಸ್ಥಳದ ಬಾವಿಯಲ್ಲಿ ವೃದ್ಧೆಯೊರ್ವರ ಶವ ಪತ್ತೆಯಾದ ಘಟನೆ ಮಂಗಳವಾರ ನಡೆದಿದೆ. ವೃದ್ಧೆಯು ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ಶಂಕಿಸಲಾಗಿದೆ. ಪ್ರಕರಣ ನಗರಣ ಠಾಣೆಯಲ್ಲಿ ದಾಖಲಾಗಿದ್ದು, ಹೆಚ್ಚಿನ ವಿವರಗಳು ತನಿಖೆಯಿಂದ ತಿಳಿದು ಬರಬೇಕಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ಮೇಲೆತ್ತಿ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಶವ ಸಾಗಿಸಲು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಇಲಾಖೆಗೆ ಸಹಕರಿಸಿದ್ದಾರೆ.
ಮೃತ ವೃದ್ಧೆ ಬಾಗಲಕೋಟೆ ಜಿಲ್ಲೆ ಮೂಲದ ವಲಸೆ ಕಾರ್ಮಿಕೆ ನೀಲಮ್ಮ(68) ಇವರು ಬನ್ನಂಜೆಯಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬದವರೊಂದಿಗೆ ವಾಸವಾಗಿದ್ದರು ಎಂದು ತಿಳಿದು ಬಂದಿದೆ.