ಉಡುಪಿ, ಬಂಟಕಲ್: ಶ್ರೀ ಸೋದೆ ವಾದಿರಾಜ ಮಠ ಸಮೂಹ ಶಿಕ್ಷಣ ಸಂಸ್ಥೆಗಳು (SSVMEI) ಮತ್ತು ಮಂಗಳೂರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಜೊತೆ ದಿನಾಂಕ 29 ಜುಲೈ 2025 ರಂದು ಒಡಂಬಡಿಕೆಗೆ ಸಹಿ ಹಾಕಿತು.
ಈ ಒಪ್ಪಂದವು ಶೈಕ್ಷಣಿಕ ಕ್ಷೇತ್ರದಲ್ಲಿ ನವೀನತೆ,ಸಂಶೋಧನೆಯಲ್ಲಿ ಉತ್ಕೃಷ್ಟತೆ ಮತ್ತು ಉದ್ಯಮಶೀಲತೆಯ ಕ್ಷೇತ್ರದಲ್ಲಿ ಅಭಿವೃದ್ಧಿ, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಮತ್ತು ಜ್ಞಾನವನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ.
ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹ್ಯಾಕಥಾನ್, ಇಂಟರ್ನ್ಶಿಪ್ ಮತ್ತು ಸಣ್ಣ ಪ್ರಾಜೆಕ್ಟ್ಗಳ ಮೂಲಕ ತಮ್ಮ ಕೌಶಲ್ಯಗಳನ್ನು ಮತ್ತು ವೃತ್ತಿಪರ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳುವಂತಹ ಸಮ್ಮೇಳನಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಎರಡೂ ಸಂಸ್ಥೆಗಳು ಜೊತೆಗೆ ಜ್ಞಾನ ವಿನಿಮಯ ಮತ್ತು ಸಂಪರ್ಕ ನಿರ್ಮಾಣಕ್ಕೆ ವೇದಿಕೆ ಸೃಷ್ಟಿಸಲಿದೆ.
ಅತ್ಯಾಧುನಿಕ ಪ್ರಯೋಗಾಲಯ ಹಾಗೂ ಉಪಕರಣಗಳನ್ನು
ಪರಸ್ಪರ ಬಳಸಲು ಅವಕಾಶ ಮಾಡಿಕೊಡಲಾಗಿದ್ದು, ಸಂಶೋಧಕರಿಗೆ ವಿಶ್ವಮಟ್ಟದ ಸೌಲಭ್ಯ ದೊರಕಲಿದೆ. ಜೊತೆಗೆ, ಬಾಹ್ಯ ಕ್ಷೇತ್ರದ ಅಗತ್ಯಗಳಿಗೆ ತಕ್ಕಂತೆ ಅಂತರ ವಿಭಾಗೀಯ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಹೆಚ್ಚುವರಿ ಕೋರ್ಸ್ಗಳನ್ನು
ರೂಪಿಸುವುದಕ್ಕೆ ಸಹಕಾರ ನಡೆಯಲಿದೆ. ಪಿ ಎಚ್ ಡಿ ಮತ್ತು ಪಿಜಿ ವಿದ್ಯಾರ್ಥಿಗಳು ಸಹ-ಮಾರ್ಗದರ್ಶನ ಮತ್ತು ಸಂಯುಕ್ತ ಮೌಲ್ಯಮಾಪನದಿಂದ ಉತ್ತಮ ಮಟ್ಟದ ಸಂಶೋಧನೆಯನ್ನು ಅನುಭವಿಸಬಹುದು.
ಉದ್ಯಮಶೀಲತೆ ಮತ್ತು ನವೀನತೆ ಅಭಿವೃದ್ಧಿಗೆ ಪ್ರಮುಖವಾದ ಈ ಸಹಕಾರ, ಇನ್ಕ್ಯುಬೇಶನ್ ಸೆಂಟರ್‌ಗಳು, ತಜ್ಞ ಮಾರ್ಗದರ್ಶನ ಮತ್ತು ರಾಷ್ಟ್ರೀಯ, ಅಂತರಾಷ್ಟ್ರೀಯ ನಿಧಿ ಪಡೆಯಲು ಸಹಕಾರ ನೀಡುತ್ತದೆ.ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ತಮ್ಮ ಸಾಹಸಾತ್ಮಕ ಆಲೋಚನೆಗಳನ್ನು ಸಾಕಾರ ಮಾಡಲು ಸಾಧ್ಯವಾಗಲಿದೆ.ಈ ಒಪ್ಪಂದವು ಪ್ರಾರಂಭದಲ್ಲಿ ಐದು ವರ್ಷದ ಅವಧಿಗೆ ಮಾನ್ಯವಾಗಿದ್ದು, ಪ್ರತಿ ವರ್ಷ ಪರಿಶೀಲನೆ ಮೂಲಕ ಸಮಯಕ್ಕೆ ಹೊಂದಿಕೊಂಡು ಮುಂದುವರಿಯುತ್ತದೆ.
ಒಪ್ಪಂದದ ಕಾರ್ಯಕ್ರಮದಲ್ಲಿ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ರತ್ನಕುಮಾರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ. ಡಾ. ರಾಧಾಕೃಷ್ಣ ಎಸ್ ಐತಾಳ್, ಪ್ರಾಧ್ಯಾಪಕರಾದ ಡಾ. ಭರತ್ ಭಟ್ ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಎಂ ಎಸ್ ಮೂಡಿತ್ತಾಯ, ನಿಟ್ಟೆ ವಿಶ್ವವಿದ್ಯಾಲಯದ ರಿಜಿಸ್ಟಾçರ್ ಡಾ. ಹರ್ಷ ಎನ್ ಹಳಹಳ್ಳಿ, ಡಾ. ವಿಜೀಶ್ ವಿ. ಉಪಸ್ಥಿತರಿದ್ದರು.
ಈ ಒಪ್ಪಂದವು ನಮ್ಮ ಶೈಣಿಕ ಉತ್ಕೃಷ್ಟತೆ ಮತ್ತು ಜಾಗತಿಕ
ಸಂಪರ್ಕದ ಬದ್ದತೆಯನ್ನು ತೋರುತ್ತದೆ ಎಂದು ಪ್ರೊ. ಡಾ.
ರಾಧಾಕೃಷ್ಣ ಎಸ್ ಐತಾಳ್ ಅವರು ಹೇಳಿದರು. ಈ ಸಹಕಾರ ಮಲ್ಟಿ ಡಿಸಿಪ್ಲಿನರಿ ಕಲಿಕೆ ಮತ್ತು ನವೀನತೆಯನ್ನು ಚಾಲನೆ ನೀಡುತ್ತದೆ ಮತ್ತು ಎರಡು ಸಂಸ್ಥೆಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಪ್ರೊ. ಮೂಡಿತ್ತಾಯ ಹೇಳಿದರು.
ರತ್ನಕುಮಾರ್ ಎರಡು ಸಂಸ್ಥೆಗಳ ನಡುವೆ ಇರುವ ಗಾಢ ಸಂಬಂಧ ಈ ಒಪ್ಪಂದದ ಮೂಲಕ ಅಧಿಕೃತವಾಗಿ ದೃಢಪಡಿಸಿಕೊಂಡಿದೆ ಎಂದರು.












