ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ
ವಿದ್ಯಾಲಯದ ವಿದ್ಯಾರ್ಥಿಗಳಾದ ಅತುಲ್ ಭಟ್, ಆದಿತ್ಯಾ, ಬಲರಾಮ್ ಭಾರದ್ವಜ್, ರಾಖಿ, ಅಲಕ ಮತ್ತು ರಜನಿ ಇವರು ದಿನಾಂಕ 15 ಜುಲೈ ರಂದು “ಕ್ಯಾನ್ವಾ ಬೇಸಿಕ್ಸ್
ಮತ್ತು ಐಒಟಿ ಅಪ್ಲಿಕೇಶನ್‌ಗಳ” ಬಗ್ಗೆ ಅನಂತೇಶ್ವರ ಆಂಗ್ಲ ಮಾಧ್ಯಮ ಫ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ಕಾರ್ಯಕ್ರಮ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಡಿಜಿಟಲ್ ಸಾಕ್ಷರತೆಯ ಬಗ್ಗೆ ಮಾಹಿತಿ ನೀಡುವುದಾಗಿದೆ. ಈ ಕಾರ್ಯಕ್ರಮದಲ್ಲಿ ಅನಂತೇಶ್ವರ ಆಂಗ್ಲ ಮಾಧ್ಯಮ ಫ್ರೌಢ ಶಾಲೆಯ 9 ಮತ್ತು 10 ನೇ ತರಗತಿಯ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಿಗೆ
ಟಿಂಕರಿಂಗ್ ಕ್ಯಾಡ್ ಬಳಸಿಕೊಂಡು ಹಾರ್ಡ್ವೇರ್ ಏಕೀಕರಣ, ಸಿಮ್ಯುಲೇಶನ್ ಮತ್ತು ಕ್ಯಾನ್ವಾ ಪ್ಲಾಟ್‌ಫಾರ್ಮ್ ಬಳಸಿಕೊಂಡು ಡಿಜಿಟಲ್ ಸೃಜನಶೀಲತೆಯ ಬಗ್ಗೆ ಮಾಹಿತಿ ನೀಡಿದರು. ಅಟಲ್ ಟಿಂಕರಿಂಗ್ ಲ್ಯಾಬ್‌ನ ಪರಿಕಲ್ಪನೆ ಮತ್ತು ಯುವ ಮನಸ್ಸುಗಳಲ್ಲಿ ಸಮಸ್ಯೆ ಪರಿಹರಿಸಿ, ಆವಿಷ್ಕಾರದ ಬಗ್ಗೆ ಮಾಹಿತಿ ನೀಡಿದರು.

ಸಂವೇದಕಗಳು ಮತ್ತು ಇತರ ಮೂಲಭೂತ ಘಟಕಗಳನ್ನು ಹೇಗೆ ಬಳಸುವುದು, ಪೋಸ್ಟರ್‌ಗಳು, ಪ್ರಸ್ತುತಿಗಳು ಮತ್ತು ಇತರ
ದೃಶ್ಯ ವಿನ್ಯಾಸವನ್ನು ರಚಿಸಲು ಬಳಸುವ ಗ್ರಾಫಿಕ್ ವಿನ್ಯಾಸ ಸಾಧನವಾದ ಕ್ಯಾನ್ವಾ ಬೇಸಿಕ್ಸ್ನ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮವನ್ನು ಸಂಸ್ಥೆಯ ಗಣಕ ಯಂತ್ರ ವಿಭಾಗದ ಶ್ರೀ
ರಾಘವೇಂದ್ರ ಈಶ್ವರ ಹೆಗ್ಡೆ ಇವರು ಸಂಯೋಜಿಸಿದರು.












