ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣವಾದ ತೀರ್ಥಮಂಟಪದ ಮೇಲ್ಛಾವಣಿಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್, ಹೊರಾಂಗಣ ಮೇಲ್ಛಾವಣಿಯನ್ನು ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ ಅವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ತಂತ್ರಿ ಪಿ. ಶಶಿಕಾಂತ್ ತಂತ್ರಿ, ಗುಂಡಿಬೈಲು ವಾಸ್ತು ತಜ್ಞ ಸುಬ್ರಹ್ಮಣ್ಯ ಭಟ್, ಬನ್ನಂಜೆ ವಾರ್ಡ್‌ನ ನಗರಸಭಾ ಸದಸ್ಯೆ ಸವಿತಾ ಹರೀಶ್ ರಾಮ್, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಕಾಂಚನ ಹುಂಡೈನ ಆಡಳಿತ ನಿರ್ದೆಶಕ ಪ್ರಸಾದ್ ರಾಜ್ ಕಾಂಚನ್, ಉಡುಪಿ ನ್ಯಾಯವಾದಿ ವಾಣಿ ವಿ. ರಾವ್, ಕಾಪು ಬಿಲ್ಲವ ಸಂಘದ ಗೌರವಾಧ್ಯಕ್ಷ ಪ್ರಭಾಕರ್ ಎಸ್. ಪೂಜಾರಿ, ಉಡುಪಿ ವೀರಶೈವ ಲಿಂಗಾಯುತ ಮಹಾಸಭಾದ ಅಧ್ಯಕ್ಷ ಪ್ರಕಾಶ್ ಸಜ್ಜನ್, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಬಿ. ಮಾಧವ ಪೂಜಾರಿ, ಸದಸ್ಯರಾದ ವಾಸುದೇವ ಉಪಾಧ್ಯ, ದಿನೇಶ್ ಪುತ್ರನ್ ಬನ್ನಂಜೆ, ಪ್ರಭಾಕರ ಶೆಟ್ಟಿ ಬನ್ನಂಜೆ, ಶೇಖರ ಶೆಟ್ಟಿ ಮೂಡನಿಡಂಬೂರು, ಸುದೇಶ್ ಶೆಟ್ಟಿ ಮೂಡನಿಡಂಬೂರು, ರಾಜೇಶ್ ಬನ್ನಂಜೆ, ವಿದ್ಯಾಲತಾ ಯು. ಶೆಟ್ಟಿ, ಶಮಿತ ಎಸ್. ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.












