ಉಡುಪಿ:ಬದ್ರಿಯಾ ಜುಮುಅ ಮಸ್ಜಿದ್ (ರಿ) ಮಲ್ಲಾರು-ಮಜೂರು ಇವರ ಆಶ್ರಯದಲ್ಲಿ ಮರ್ಹಬ ಯಾ ಶಹ್ ರ ರಬಿಲ್ ವಾರ್ಷಿಕ ಸ್ವಲಾತ್ ಮತ್ತು ಪ್ರಭಾಷಣಾ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತ ಧಾರ್ಮಿಕ ಭಾಷಣಗಾರರಾದ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ರವರಿಂದ ಪ್ರೌಡೋಜ್ವಲವಾದ ಪ್ರಭಾಷಣದ ವೇದಿಕೆ ಸಮಾರಂಭದಲ್ಲಿ ಬಿ.ಜೆ.ಎo ಮಸೀದಿಯ ಅಧ್ಯಕ್ಷರಾದ ಡಾ.ಯು.ಎಂ ಫಾರೂಕ್ ಚಂದ್ರನಗರ ಇವರ ನೇತೃತ್ವದಲ್ಲಿ ಮಸೀದಿ ಸಭಾಂಗಣದಲ್ಲಿ ನಡೆಯಿತು.
ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಮಾತನಾಡಿ ಈ ಮಸೀದಿಯ ಅಧ್ಯಕ್ಷರಾದ ಡಾ.ಫಾರುಕ್ ಚಂದ್ರನಗರ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಕೆಲಸಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದು ಶ್ಲಾಗಿಸಿದರು. ಕುರಾನ್ ನಲ್ಲಿ ತಂದೆ ತಾಯಿಗೆ ಕೊಡುವ ಗೌರವ ಸಮಾಜದಲ್ಲಿ ನಾವು ಹೇಗೆ ಬದುಕಿ ಬಾಳಬೇಕೆಂಬ ವಿಷಯ ಹಾಗೂ ಮಾದಕ ದ್ರವ್ಯ ವ್ಯಸನದಿಂದ ಹೊರಗೆ ಬರುವ ಮಾಹಿತಿಯನ್ನು ಉತ್ತಮವಾಗಿ ಸಾರ್ವಜನಿಕರಿಗೆ ತಿಳಿಸಿದರು.
ವಾರ್ಷಿಕ ಸಲ್ವಾತ್ ನೇತೃತ್ವ ಅಸ್ಸಯ್ಯದ್ ಸಾದಾತ್ ತಂಗಲ್ ಗುರುವಾಯನಕೆರೆ ವಹಿಸಿ ಧಾರ್ಮಿಕ ಪ್ರವಚನ ನೀಡಿದರು.
ಅಧ್ಯಕ್ಷತೆ ವಹಿಸಿದ ಬಿ.ಜೆ.ಎಂ ಮಸೀದಿಯ ಅಧ್ಯಕ್ಷರಾದ ಡಾ.ಯು ಎಂ ಫಾರೂಕ್ ಚಂದ್ರನಗರ ಮಾತನಾಡಿ 120 ವರ್ಷ ಹಿಂದಿನ ಈ ಮಸೀದಿಯು ಪುರಾತನದಿಂದ ಗುಡ್ಡೆ ಮಸೀದಿ ಎಂದು ಖ್ಯಾತಿ ಪಡೆದು ಹಲವಾರು ಪವಾಡಕ್ಕೆ ಹೆಸರುವಾಸಿಯಾಗಿದ್ದು ಇಲ್ಲಿಯ ಜಮಾತಿನ ಜನರು ಹಾಗೂ ಊರಿನವರು ಸೌಹಾರ್ದತೆಯಿಂದ ಬಾಳಿ ಬದುಕಿದ ನಿರ್ದೇಶನ ಹಲವಾರು ಇದೆ. ಇಲ್ಲಿ ಅಭಿವೃದ್ಧಿಗೆ ಸಹಕಾರ ಮಾಡಿದ ಜಮಾತ್ ಕಮಿಟಿ ಸದಸ್ಯರುಗಳು ಹಾಗೂ ಜಮಾತಿನ ಅಂಗ ಸಂಸ್ಥೆಯವರು , ಜಮಾತಿಗರ ಹಾಗೂ ಹೊರ ಜಮಾತಿಗರ ಸಹಕಾರ ಸ್ಮರಿಸಿ ಕೃತಾಜ್ಯತೆ ಸಲ್ಲಿಸಿದರು.ಉದ್ಘಾಟನೆಯನ್ನು ಬಿ.ಜೆ.ಎಂ ಖತಿಬರಾದ ಎಂ ಕೆ ಅಬ್ದುಲ್ ರಶೀದ್ ಸಖಾಫಿ ನೆರವೇರಿಸಿದರು.
ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಮಾತನಾಡಿ ಡಾ. ಫಾರೂಕ್ ಚಂದ್ರನಗರ ಧಾರ್ಮಿಕ ಸೇವೆ ಹಾಗೂ ಸಮಾಜ ಸೇವೆಯಲ್ಲಿ ಉತ್ತಮ ಸಂಘಟಕ ಎಂದು ಶ್ಲಾಗಿಸಿದರು . ಮುಖ್ಯ ಅಥಿತಿಯಾಗಿ
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಅತಿಥಿಗಳಾಗಿ ಅನಿವಾಸಿ ಭಾರತೀಯ ಉದ್ಯಮಿ ಪರ್ಕಳ ರಜಬ್ ಬ್ಯಾರಿ, ವಿಧಾನ ಪರಿಷತ್ ಶಾಸಕರಾದ ಅಬ್ದುಲ್ ಜಬ್ಬಾರ್, ಸಮಾಜ ಸೇವಕ ಡಾ/ ಹಾಜಿ ಶೇಖ್ ವಾಹಿದ್ ದಾವುದ್, ಉದ್ಯಮಿ ಅಶ್ರಫ್ ನೇಜಾರು, ದಸ್ತ ಗಿರಿ ಕಂಡ್ಲೂರು, ಉಡುಪಿ ಜಿಲ್ಲಾ ಕಾಂಗ್ರೇಸ್ ಅಲ್ಪ ಸಂಖ್ಯಾತರ ಅಧ್ಯಕ್ಷ ಸರ್ಪುದ್ದಿನ್ ಶೇಖ್, ದಕ್ಷಿಣಾ ಕನ್ನಡ ಮದ್ರಸಾ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಹಾಜಿ ಎಂ ಹೆಚ್ ಮೊಹಿದ್ದೀನ್, ಬಿ.ಜೆ.ಎಂ ಪ್ರ. ಕಾರ್ಯದರ್ಶಿ ಅಶ್ರಫ್ ಮೂಸ, ಅನಿವಾಸಿ ಉದ್ಯಮಿ ಅಬ್ದುಲ್ಲ ಉಚ್ಚಿಲ, ಕಾಪು ಎಸ್ ಡಿ ಪಿ ಐ ಅಧ್ಯಕ್ಷ ಸಾದಿಕ್ ಕೆ. ಪಿ, ಕಾಪು ಜಾಮಿಯಾ ಮಸೀದ್ ಖಾಝಿ, ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಶಾಂತ್ ಜತ್ತನ್ನ , ಕೆ ಎಂ ಡಿ ಸಿ ನಿಗಮ ನಿರ್ದೇಶಕರಾದ ಸಿರಾಜ್ ದಾವಣಗೆರೆ, ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಉಪಾಧ್ಯಕ್ಷ ಮುನೀರ್ ಉಸ್ತಾದರುಗಳಾದ ಅಬೂಬಕ್ಕರ್ ಸಿದ್ದೀಕ್ ಸಹಾದಿ, ಮೊಹಮ್ಮದ್ ತಾಜುದ್ದೀನ್ ಸಖಾಪಿ, ಅಬೂಬಕ್ಕರ್ ಸಹದೀ, ಮಹಮ್ಮದ್ ಅಶ್ರಫ್ ಮದನಿ, ಇಬ್ರಾಹಿಂ ತೌಸಿಫ್ ಅನಾಪಿ, ಜುನೈದ್ ಸಖಾಫಿ, ಹಸನಬ್ಬ ಬ್ಯಾರಿ ಮಜೂರು,ಅಬ್ದುಲ್ ರಝಕ್ ಇಸ್ಮಾಯಿಲ್, ಪಿ. ಎಂ ಇಬ್ರಾಹಿಂ, ಮಹಮ್ಮದ್ ಹನೀಫ್, ಅಬ್ದುಲ್ ರಹೀಂ, ಯು. ಎ ರಶೀದ್ ಕಾಪು , ಎಂ ಹೆಚ್ಚ್ ಅಬ್ದುಲ್ ಹಮೀದ್, ಸಂಶುದ್ದೀನ್ ಉಮ್ಮರ್ k.S.A, ರಿಯಾಜ್ ಮೋಹಿದೀನ್, ಹಾಜಿ ಕೆ ಹಾಜಬ್ಬ, ಜುಬೇರ್ ಅಹಮದ್ ಆಲಿ ಶಿರ್ವ, ವೇಲು ಮಲ್ಲಾರು, ಹಾಜಿ ಎಂ ಎಚ್ ಹಮಬ್ಬ ಪಡುಬಿದ್ರಿ, ಹೆಚ್ಚ್ ಆರ್ ಹಸನ್ ಇಬ್ರಾಹಿಂ, ಆಸಿಫ್ ಅಯನ್ ಡೆಕೋರೆಟರ್ಸ್, ಹಸನಬ್ಬ ಶೇಖ್ ಶಿರ್ವ, ತಬ್ರೆಸ್ ನಾಗುರ್, ಅನಿಫ್ ಗುಲ್ವಾಡಿ, ನಿಯಸ್ ಪಡುಬಿದ್ರಿ, ನಕ್ವ ಯಹಿಯಉಡುಪಿ, ಮುಸ್ತಾಕ್ ಹೆಣ್ಣೆಬೈಲು, ಹಬೀಬ್ ಉಡುಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.












