ಉಡುಪಿ: ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿವೆ.ಉಡುಪಿಯಲ್ಲಿ ಆಟೋದ ಒಳಗೆ ಹಾವೊಂದು ಅವಿತು ಕುಳಿತಿದ್ದು ಆಟೋ ಚಲಾಯಿಸುತ್ತಿರುವಾಗ ಹೊರಬಂದಿದೆ. ಇದನ್ನು ಗಮನಿಸಿದ ಚಾಲಕ ಆಟೋವನ್ನು ಅಲ್ಲೇ ನಿಲ್ಲಿಸಿ ಓಡಿದ್ದು ಅಪಘಾತದಿಂದ ಪಾರಾಗಿದ್ದಾರೆ.
ವಿಷಕಾರಿಯಲ್ಲದ ಈ ಹಾವು ಆಟೋ ಒಳಭಾಗದ ಡ್ಯಾಶ್ ಬೋರ್ಡ್ ಬಾಕ್ಸ್ ನಲ್ಲಿ ಅವಿತಿತ್ತು. ದಾರಿ ನಡುವೆ ಏಕಾಏಕಿ ಹೊರ ಬಂದ ಹಾವನ್ನು ನೋಡಿ ಚಾಲಕ ಹೌಹಾರಿದ್ದಾರೆ.ಕೊನೆಗೆ ಆಟೋ ನಿಲ್ಲಿಸಿ ಉರಗ ತಜ್ಞ ನಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ಉರಗ ತಜ್ಞ ಪ್ರಾಣೇಶ್ ಪರ್ಕಳ, ಹಾವನ್ನು ರಕ್ಷಸಿ ಸಮೀಪದ ಅರಣ್ಯಕ್ಕೆ ಬಿಟ್ಟು ಬಂದರು.












