ಉಡುಪಿ: ಸವ್ಯಸಾಚಿ ಸೇವಾ ಸಂಗಮ ಶಿಶುಮಂದಿರ ಆತ್ರಾಡಿ ಮತ್ತು ಜೈ ಹನುಮಾನ್ ಯುವಕ ಸಂಘ ಇವರ ಆಶ್ರಯದಲ್ಲಿ ಇಂದು ಕೃಷ್ಣ ಜನ್ಮಾಷ್ಟಮಿಯನ್ನು ಸುರಕ್ಷಾ ಸಭಾ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಪೂರ್ವಬಾವಿಯಾಗಿ ಪುಟಾಣಿ ಮಕ್ಕಳಿಗೆ ಕೃಷ್ಣ,- ರಾಧೆಯರ ವೇಷವನ್ನು ತೊಡಿಸಿ ವಿವಿಧ ಟ್ಯಾಬ್ಲೋ, ಚಂಡೆವಾದನ, ಬ್ರಹ್ಮರಾಂಭಿಕ ಭಜನಾ ತಂಡ ಕೆಳ ಆತ್ರಾಡಿಯವರ ದೇವರ ಕೀರ್ತನೆಯೊಂದಿಗೆ ಆತ್ರಾಡಿ ಪೇಟೆಯಲ್ಲಿ ಆಕರ್ಷಕ ಭವ್ಯ ಶೋಭಾ ಯಾತ್ರೆಯನ್ನು ನಡೆಸಲಾಯಿತು.
ಮೆರವಣಿಗೆಯಲ್ಲಿ ಊರ ಮಹನೀಯರಾದ ಪಾದೆಕಲ್ ವಿಷ್ಣು ಭಟ್, ದಿಲೀಪ್ ರಾಜ್ ಹೆಗ್ಡೆ, ಸತ್ಯಾನಂದ ನಾಯಕ್ ಆತ್ರಾಡಿ, ರತ್ನಾಕರ ಶೆಟ್ಟಿ, ಸಾಧು ಪೂಜಾರಿ ಮದಗ, ಚಂದ್ರ ರಾಜ್ ನಾಯ್ಕ್, ದೇವೇಂದ್ರ ಕಾಮತ್, ಸಂತೋಷ್ ಪೂಜಾರಿ, ಶ್ರೀನಿವಾಸ್ ಶೆಟ್ಟಿಗಾರ್ , ಲಕ್ಸ್ಮಿನಾರಾಯಣ ನಾಯಕ್, ಶ್ರೀನಿವಾಸ್ ನಾಯಕ್, ಕೃಷ್ಣ ನಾಯ್ಕ್, ಮಿಥುನ್ ಶೆಟ್ಟಿ, ಮನೋಜ್ ಶೆಟ್ಟಿ, ಅನಿಲ್ ಪೂಜಾರಿ, ಶಂಕರ್ ಪೆರ್ಣoಕಿಲ , ಪತಂಜಲಿ ಯೋಗ ಶಿಕ್ಷಣ ವಿವೇಕಾನಂದ ಶಾಖೆ ಯ ಸದಸ್ಯರು ಮತ್ತು ಜೈ ಹನುಮಾನ್ ಸಂಘದ ಸದಸ್ಯರು ಮುಂತಾದ ವರು ಭಾಗವಹಿಸಿದ್ದರು.


ಮೆರವಣಿಗೆ ನಂತರ ಮಕ್ಕಳಿಗೆ ಮಡಕೆ ಒಡೆಯುವ ಸ್ಪರ್ಧೆ ಸಹಿತ ವಿವಿಧ ಸ್ಪರ್ಧೆಗಳನ್ನು ನಡೆಸಿ ನಂತರ ಶಿಶುಮಂದಿರದ ಪುಟಾಣಿ ಗಳಿಂದ ನೃತ್ಯ ಕಾರ್ಯಕ್ರಮ ಮತ್ತು ವಿವಿಧ ಮನೋರಂಜನೆ ಕಾರ್ಯಕ್ರಮಗಳು ನಡೆದವು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಶು ಮಂದಿರದ ಅಧ್ಯಕ್ಷರು ಮತ್ತು ನಿವೃತ್ತ ಹಿರಿಯ ಆದಾಯ ತೆರಿಗೆ ಅಧಿಕಾರಿ ಶ್ರೀ ಕೃಷ್ಣ ಮೂರ್ತಿ ಪ್ರಭು ರವರು ವಹಿಸಿ ಕೊಂಡು ಸವ್ಯ ಸಾಚಿ ಶಿಶು ಮಂದಿರ ನಡೆದು ಬಂದ ದಾರಿ, ಅದರ ಉದ್ದೇಶ ಮತ್ತು ವಿಟ್ಲ ಪಿಂಡಿ ಉತ್ಸವದ ಮಹತ್ವ ವನ್ನು ತಿಳಿಸಿದರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಪಟ್ಲ ಪ್ರೌಢಶಾಲೆಯ ನಿವೃತ್ತ ಮುಖ್ಯ ಉಪಾಧ್ಯಾಯ ಎಚ್. ಏನ್. ನಟರಾಜ್ ರವರು ಕೃಷ್ಣ ಜನ್ಮಾಷ್ಟಮಿಯ ಮಹತ್ವ, ಕೃಷ್ಣ ನ ಲೀಲೆಯನ್ನು ತಿಳಿಸುತ್ತಾ ಭಾರತೀಯ ಸನಾತನ ಸಂಸ್ಕೃತಿಯ ಆಚಾರ ವಿಚಾರಗಳ ವಿಮರ್ಶೆ ಮಾಡಿದರು. ಜೈ ಹನುಮಾನ್ ಸಂಘದ ಅಧ್ಯಕ್ಷರು ಉದಯ ನಾಯ್ಕ್ ಇವರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸುಬ್ರಾಯ ಕೃಷ್ಣ ಭಟ್ ಮತ್ತು ದಿನೇಶ್ ಶೆಟ್ಟಿಗಾರ್ ರವರು ಮಾಡಿದರು. ಜೈ ಹನುಮಾನ್ ಸಂಘದ ಸುಧಾಕರ್ ನಾಯಕ್ ರವರು ಸ್ವಾಗತ ಮಾಡಿದರು. ಸಂಪತ್ ರವರು ಧನ್ಯವಾದಗಳನ್ನಿತ್ತರು.












