ಉಡುಪಿ:ಉಡುಪಿ ದಕ್ಷಿಣ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಅಂಚೆ ಇಲಾಖೆಯಲ್ಲಿ ಕರ್ನಾಟಕ ಮಹಾ ಅಂಚೆ ಪಾಲಕರಿಂದ ಇವರ ಸಾಧನೆಗೆ ಎರಡು-ಮೂರು ಪ್ರಶಸ್ತಿ ಪಡೆದು ಉಡುಪಿ ವಿಭಾಗದ ಕರ್ನಾಟಕದಲ್ಲಿ ಪ್ರಶಸ್ತಿ ಬಂದು ಉಡುಪಿ ವಿಭಾಗ ಅಂಚೆ ಅಧಿಕ್ಷಕರಿಂದ ಮೆಚ್ಚುಗೆ ಪಡೆದು ಉಡುಪಿ ದಕ್ಷಿಣ ವಿಭಾಗದ ಸಹಾಯಕ ಅಂಚೆ ಅಧಿಕ್ಷಕರಿಗೆ ಉಡುಪಿ ಡಿವಿಜನ್ ಸಿಬ್ಬಂದಿಗಳು ಹಾಗೂ ದಕ್ಷಿಣ ವಿಭಾಗದ ಅಂಚೆಪಾಲಕರು ಹಾಗೂ ಸಹಾಯಕ ಅಂಚೆಪಾಲಕರಿಂದ ಸನ್ಮಾನ ಕಾರ್ಯಕ್ರಮವು ಉಡುಪಿ ಪ್ರಧಾನ ಅಂಚೆ ಕಚೇರಿಯ ಸಭಾಂಗಣದಲ್ಲಿ ಉಡುಪಿ ವಿಭಾಗ ಅಂಚೆ ನಿರೀಕ್ಷಕರಾದ ಶಂಕರ ಲಮಾಣಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಉಡುಪಿ ಪ್ರಧಾನ ಅಂಚೆ ಪಾಲಕಿ ಶ್ರೀಮತಿ ವೃಂದ ವಿ ರಾವ್ ಮಣಿಪಾಲ ಅಂಚೆ ಕಚೇರಿಯ ಸೂಪರ್ವೈಸರ್ ಅಂಚೆ ಯೂನಿಯನ್ ರಾಜ್ಯಧ್ಯಕ್ಷ ಸುರೇಶ್ ಕೆ ಉಡುಪಿ ವಿಭಾಗ ಅಧಿಕಾರಿ ಸರ್ವೋತ್ತಮ ಪಣಿಯೂರು ಅಂಚೆ ದಕ್ಷಿಣ ವಿಭಾಗ ಗ್ರಾಮೀಣ ಅಂಚೆ ಕಚೇರಿಯ ಪರವಾಗಿ ಕಳತ್ತೂರು ಅಂಚೆಪಾಲಕ ದಿವಾಕರ್ ಶೆಟ್ಟಿ, ಎಲ್ಲೂರು ಅಂಚೆ ಪಾಲಕಿ ಶ್ರೀಮತಿ ವಾಣಿ ರಾವ್ . ಅಂಚೆ ಪಾಲಕಿ ಆಶಾ ಇವರು ಜಂಟಿಯಾಗಿ ಸನ್ಮಾನಿಸಿದರು.
ಇಲಾಖೆ ಸಿಬ್ಬಂದಿಗಳು ಸಹಾಯಕ ಅಧೀಕ್ಷಕರ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ನೀಡಿದರು. ದಕ್ಷಿಣ ವಿಭಾಗ ಅಂಚೆ ಮೇಲ್ವಿಚಾರಕರಾದ ಸಂತೋಷ್ ಮಧ್ಯಸ್ಥ ಸ್ವಾಗತ ಮಾಡಿ ಹೇರೂರು ಅಂಚೆ ಪಾಲಕಿ ಕುಮಾರಿ ನವ್ಯ ಸುವರ್ಣ ಕಾರ್ಯಕ್ರಮ ನಿರೂಪಿಸಿ ಪಣಿಯೂರು ಅಂಚೆ ಪಾಲಕಿ ಗೌರಿ ಶ್ರೀ ಪ್ರಸ್ತಾವನೆ ಗೈದು ಉಡುಪಿ ದಕ್ಷಿಣ ವಿಭಾಗ ಅಂಚೆ ಮೇಲ್ವಿಚಾರಕರಾದ ರವಿ ಕಡೆಕಾರು ಧನ್ಯವಾದ ನೀಡಿದರು.












