ಉಡುಪಿ: ಅಷ್ಟಮಿ ಟ್ರೋಫಿ-2025″ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ- ‘ಕೃಷ್ಣ ಕಿಂಗ್ಸ್” ತಂಡ ಚಾಂಪಿಯನ್

ಉಡುಪಿ: ಅಜ್ಜರಕಾಡು ಬ್ಯಾಡ್ಮಿಂಟನ್ ಕ್ಲಬ್ ಮಾರ್ನಿಂಗ್ ಶೆಟ್ಟಲ್ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ ” ಅಷ್ಟಮಿ ಟ್ರೋಫಿ-2025″ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ನಾಗೇಂದ್ರ ಮಾಲಕತ್ವದ “ಕೃಷ್ಣ ಕಿಂಗ್ಸ್” ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು.

ದಿವಾ ನಂಬಿಯಾರ್ ಮಾಲಕತ್ವದ ವಿಕ್ಟೋರಿಯಾ ವೃಂದಾವನ್ ತಂಡವು ಒಂದನೇ ರನ್ನರ್ಸ್ ಅಪ್ ಪ್ರಶಸ್ತಿ ಹಾಗೂ ನಂದಕಿಶೋರ್ ಮಾಲಕತ್ವದ ಮಥುರಾ ಮಾಸ್ಟರ್ಸ್ ತಂಡವು ಎರಡನೇ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.
ಪಂದ್ಯಾಟವನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟಿಸಿ ಶುಭಾಹಾರೈಸಿದರು.

ಅಜ್ಜರಕಾಡು ಬ್ಯಾಡ್ಮಿಂಟನ್ ಕ್ಲಬ್ ಮಾರ್ನಿಂಗ್ ಶೆಟಲ್ ಫ್ರೆಂಡ್ಸ್ ಅಧ್ಯಕ್ಷ ಗಣೇಶ್ ಕುಮಾರ್ ಮಟ್ಟು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಂಚಿನ ಪದಕ ಮತ್ತು ಕರಾಟೆ ನ್ಯಾಷನಲ್ ನಲ್ಲಿ ಬೆಳ್ಳಿ ಪದಕ ಗಳಿಸಿದ ರಾಮದಾಸ್ ನಾಯಕ್ ಹಾಗೂ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದ ವ್ಯವಸ್ಥಾಪಕ ಶೇಖರ್ ಅಮೀನ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶ್ರೀ ಪ್ರಸಾದ್ ರಾಜ್ ಕಾಂಚನ್, ಮ್ಯಾನೇಜಿಂಗ್ ಡೈರೆಕ್ಟರ್ ಕಾಂಚನ ಹುಂಡೈ, ರಾಜೇಂದ್ರ ನಾಯಕ್ ಎಂ ಎನ್ ಪೋಲಿಸ್ ಇನ್ಸ್ಪೆಕ್ಟರ್ ಲೋಕಾಯುಕ್ತ ಉಡುಪಿ, ಡಾ. ರೋಷನ್ ಶೆಟ್ಟಿ ಉಪ ನಿರ್ದೇಶಕರು ಡಿಪಾರ್ಟ್ಮೆಂಟ್ ಆಫ್ ಯುತ್ ಎಂಪವರ್ ಮೆಂಟ್ ಅಂಡ್ ಸ್ಪೋರ್ಟ್ಸ್ , ಶ್ರೀ ಬದ್ರಿನಾಥ ನಾಯಿರಿ ಪಬ್ಲಿಕ್ ಪ್ರಾಸಿಕ್ಯೂಟರ್ , ಮಂಗಳೂರು , ಶ್ರೀ ಹರೀಶ್ ಶೆಟ್ಟಿ ನಗರಸಭಾ ಸದಸ್ಯರು , ಗುರುರಾಜ್ ಸಾಲಿಯನ್ ಮಾಲಕರು ಜೇಸ್ಮಾ ಬ್ಯಾಡ್ಮಿಂಟನ್ ಅಕಾಡೆಮಿ , ಶ್ರೀ ಕಾಶಿರಾಮ್ ಪೈ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಸಂಘ, ಶ್ರೀಮತಿ ಶಾಲಿನಿ ಶೆಟ್ಟಿ ಕೋಚ್ ಯುನೈಟೆಡ್ ಅಥ್ಲೆಟಿಕ್ಸ್ ಉಡುಪಿ, ಹಾಗೂ ಸಮಾರೋಪ ಸಮಾರಂಭದಲ್ಲಿ ಶ್ರೀ ಉದಯಕುಮಾರ್ ಶೆಟ್ಟಿ ಚೀಫ್ ಪ್ಲಾನಿಂಗ್ ಆಫೀಸರ್ ಜಿಲ್ಲಾ ಪಂಚಾಯತ್ ಉಡುಪಿ, ಶ್ರೀ ಮಂಜಪ್ಪ ಡಿಆರ್ ಸರ್ಕಲ್ ಇನ್ಸ್ಪೆಕ್ಟರ್ ಕಾರ್ಕಳ, ಶ್ರೀ ರಾಘವೇಂದ್ರ ಸಿ ಪೊಲೀಸ್ ಇನ್ಸ್ಪೆಕ್ಟರ್ ಸಿಐಡಿ ಮಂಗಳೂರು, ಶ್ರೀ ರಮೇಶ್ ಕಾಂಚನ್ ಅಧ್ಯಕ್ಷರು ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ, ಶ್ರೀ ಬಿ ಎಂ ಹೆಗ್ಡೆ ನಿವೃತ್ತ ಪ್ರೊಫೆಸರ್, ಶ್ರೀ ವಿದ್ಯಾಧರ ಶೆಟ್ಟಿ ಡೆಪ್ಯೂಟಿ ರೀಜನಲ್ ಮೆನೇಜರ್ ಬ್ಯಾಂಕ್ ಆಫ್ ಬರೋಡ, ಶ್ರೀ ರಾಜೇಶ್ ಕರ್ಕೇರ ಲಕ್ಷ್ಯ ಸಿ ಸ್ಕ್ವೇರ್ ಇನ್ಫ್ರಾ ಕನ್ಸಲ್ಟೆಂಟ್, ಶ್ರೀ ಸಾಗರ್ ಶೆಟ್ಟಿ ರಿ ಯೂನಿಯನ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್,ಶ್ರೀ ಸೋಹೆಲ್ ಅಮೀನ್ ಜೊತೆ ಕಾರ್ಯದರ್ಶಿ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಸಂಘ ಉಪಸ್ಥಿತರಿದ್ದರು.
ಜಯರಾಮ ಆಚಾರ್ಯ ಹಾಗೂ ಅಮಿತ್ ವಂದಿಸಿದರು. ನಂದಕಿಶೋರ್ ಕೆಮ್ಮಣ್ಣು ಕಾರ್ಯಕ್ರಮ ನಿರೂಪಿಸಿದರು.