ಉಡುಪಿ: ರಾಜ್ಯ ಸರ್ಕಾರದ ವತಿಯಿಂದ ಕಾರ್ಯಾಚರಿಸುತ್ತಿರುವ ಮೈಸೂರಿನ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಅಂಧ ಮಕ್ಕಳಿಗೆ ಮತ್ತು ಶ್ರವಣದೋಷವುಳ್ಳ ಮಕ್ಕಳಿಗೆ ಶಿಕ್ಷಕರಾಗಲು 2 ವರ್ಷಗಳ ವಿಶೇಷ ಡಿ.ಎಡ್ ತರಬೇತಿಗೆ, ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ. 50 (ಎಸ್.ಸಿ, ಎಸ್.ಟಿ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಶೇ.45)
ಅಂಕಗಳೊಂದಿಗೆ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಂದ ವೆಬ್ಸೈಟ್ https://nber-rehabcouncil.gov.in/ ನಲ್ಲಿ ಅರ್ಜಿ ಅಹ್ವಾನಿಸಲಾಗಿದೆ.
ತರಬೇತಿ ಕಾರ್ಯಕ್ರಮಗಳು : D.Ed.Spl.Ed(VI)- Helen Keller Govt. Teachers Training Centre for Visually Handicapped – KK016.
D.Ed.Spl.Ed(HI)–Govt. Teachers Training Centre for Hearing Handicapped –
KK015
ತರಬೇತಿ ಕಾರ್ಯಕ್ರಮಗಳು ರೆಗ್ಯೂಲರ್ ಆಗಿದ್ದು, ವಿಕಲಚೇತನರು ಸೇರಿದಂತೆ ಸಾಮಾನ್ಯ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಗಳು ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ಬೋಧನ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಸಲು ಜುಲೈ 12 ಕೊನೆಯ ದಿನ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು (ತರಬೇತಿ) ರವರ ಕಛೇರಿ, ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ಸರ್ಕಾರಿ ತರಬೇತಿ ಕೇಂದ್ರ, ಪುಲಿಕೇಶಿ ರಸ್ತೆ, ತಿಲಕ್ನಗರ, ಮೈಸೂರು, ದೂರವಾಣಿ ಸಂಖ್ಯೆ : 0821-2491600, ತರಬೇತಿ ಸಂಯೋಜಕಿ ಆಶಾ.ವಿ.ಹಿರೇಮಠ್ ಮೊ.ನಂ: 9113561620 ಹಾಗೂ ಟಿ.ಡಿ. ಮಂಜುನಾಥ ಮೊ.ನಂ: 9686762378 ಅನ್ನು
ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.












