ಉಡುಪಿ: ಪ್ರಸಕ್ತ ಸಾಲಿನ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಭೋವಿ ಜನಾಂಗದವರಿಗೆ, ಸ್ವಯಂ ಉದ್ಯೋಗ, ನೇರಸಾಲ, ಉದ್ಯಮಶೀಲತಾ ಅಭಿವೃದ್ಧಿ, ಮೈಕ್ರೋ ಕ್ರೆಡಿಟ್ ಹಾಗೂ ಗಂಗಾ ಕಲ್ಯಾಣ ಯೋಜನೆ , ಭೂ ಒಡೆತನ ಯೋಜನೆ, ಸಾಲ ಸೌಲಭ್ಯಕ್ಕಾಗಿ ಅರ್ಹ ಫಲಾನುಭವಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಧಿಕೃತ ವೆಬ್ಸೈಟ್ https://kbdc.karnataka.gov.in ನಲ್ಲಿ ಅಕ್ಟೋಬರ್ 14 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ, 0820-2574884 ನ್ನು ಸಂಪರ್ಕಿಸುವಂತೆ ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.