ಏಂಜೆಲ್ ಝುಂಬಾ ಫಿಟ್ನೆಸ್ ಸ್ಟುಡಿಯೋ 4ನೇ ವರ್ಷದ ಸಂಭ್ರಮ: ಉಡುಪಿಯಲ್ಲಿ ಜುಂಬಾ ಮಾಸ್ಟರ್ ಕ್ಲಾಸ್

ಉಡುಪಿ: ಏಂಜೆಲ್ ಝುಂಬಾ ಮತ್ತು ಫಿಟ್ನೆಸ್ ಸ್ಟುಡಿಯೋ ವತಿಯಿಂದ “ಜುಂಬಾ ಮಾಸ್ಟರ್ ಕ್ಲಾಸ್” ಹಾಗೂ ಸಂಸ್ಥೆಯ 4ನೇ ವರ್ಷದ ವಾರ್ಷಿಕೋತ್ಸವ ಆಚರಣೆ ಮಾರ್ಚ್ 28, 2026ರಂದು ಸಂಜೆ 6:30ಕ್ಕೆ ಉಡುಪಿಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಝುಂಬಾ ತರಬೇತುದಾರರಾದ ZIN ಪೂರ್ಣಿಮಾ ಪೆರ್ಗನ್ನ ಹಾಗೂ ಪುಣೆಯಿಂದ ವಿಶೇಷ ಅತಿಥಿಯಾಗಿ ಆಗಮಿಸುವ ZIN ಕರಿಷ್ಮಾ ಭಾಗವಹಿಸಿ ವಿಶೇಷ ಝುಂಬಾ ತರಗತಿಯನ್ನು ನಡೆಸಲಿದ್ದಾರೆ. ಫಿಟ್ನೆಸ್ ಹಾಗೂ ನೃತ್ಯ ಪ್ರಿಯರಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಎಲ್ಲರೂ ಭಾಗವಹಿಸಲು ಆಹ್ವಾನಿಸಲಾಗಿದೆ.

ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಇತರರಿಗೆ ₹300, ಏಂಜೆಲ್ ಫಿಟ್ನೆಸ್ ವಿದ್ಯಾರ್ಥಿಗಳಿಗೆ ₹150 ಮತ್ತು ಮಕ್ಕಳಿಗೆ (ವಯಸ್ಸಿನ ಮಿತಿ ಇಲ್ಲ) ₹100 ಎಂದು ತಿಳಿಸಲಾಗಿದೆ.

ಆಸಕ್ತರು ಮುಂಚಿತವಾಗಿ ರಿಜಿಸ್ಟರ್ ಮಾಡಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞9380323108