ನವೀಕೃತ ಅಂಬಲಪಾಡಿ ಶ್ರೀ ರಾಮಾಂಜನೇಯ ಪೂಜಾ ಮಂದಿರ (ವ್ಯಾಯಾಮ ಶಾಲೆ) ಪುನರ್ ಪ್ರತಿಷ್ಠೆ, ಪ್ರವೇಶೋತ್ಸವ

ಉಡುಪಿ: ಖ್ಯಾತ ವ್ಯಾಯಾಮ ಶಿಕ್ಷಕರಾಗಿದ್ದ ಅಂಬಲಪಾಡಿ ದಿ| ಕುಸ್ತಿ ಐತಪ್ಪ ಸುವರ್ಣರವರಿಂದ ಸ್ಥಾಪಿಸಲ್ಪಟ್ಟಿದ್ದ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ನವೀಕೃತ ಶ್ರೀ ರಾಮಾಂಜನೇಯ ಪೂಜಾ ಮಂದಿರ (ವ್ಯಾಯಾಮ ಶಾಲೆ) ಇದರ ಪುನರ್ ಪ್ರತಿಷ್ಠೆ, ಪ್ರವೇಶೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಜ.17ರಂದು ಕುತ್ಪಾಡಿ ಕಾನಂಗಿ ಬಾಲಕೃಷ್ಣ ಭಟ್ ರವರ ಪೌರೋಹಿತ್ಯದಲ್ಲಿ ಸರಳ ರೀತಿಯಲ್ಲಿ ನೆರವೇರಿತು.

ಶ್ರೀ ನಾರಾಯಣ ಗುರು ಭಜನಾ ಮಂಡಳಿ ಕಿದಿಯೂರು ಇವರಿಂದ ಭಜನಾ ಸೇವೆ ನಡೆಯಿತು. ಮಹಾಪೂಜೆಯ ಬಳಿಕ ಅನ್ನ ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ದಿ| ಕುಸ್ತಿ ಐತಪ್ಪ ಸುವರ್ಣರವರ ಶಿಷ್ಯ ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಗೋವರ್ಧನ್ ಎನ್. ಬಂಗೇರ, ರಾಷ್ಟ್ರೀಯ ದೇಹದಾರ್ಢ್ಯ ಪಟು ನಿತ್ಯಾನಂದ ಕೋಟ್ಯಾನ್, ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಕಾರ್ಯಾಧ್ಯಕ್ಷ ಚಂದ್ರಹಾಸ್ ಕಾಂಚನ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಾಮತ್, ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ, ಮಾಜಿ ಅಧ್ಯಕ್ಷ ಕೆ.ಮಂಜಪ್ಪ ಸುವರ್ಣ, ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಭೋಜರಾಜ್ ಆರ್. ಕಿದಿಯೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಶ್ರೀ ರಾಮಾಂಜನೇಯ ಪೂಜಾ ಮಂದಿರ ಹಾಗೂ ವ್ಯಾಯಾಮ ಶಾಲೆಯ ಗೌರವ ಸಂಚಾಲಕ ಶೇಖರ್ ಎ. ಜತ್ತನ್, ಪ್ರಧಾನ ಸಂಚಾಲಕ ಶಿವಕುಮಾರ್ ಅಂಬಲಪಾಡಿ, ಕೋಶಾಧಿಕಾರಿ ಕೇಶವ ಎ. ಜತ್ತನ್, ಸಹ ಸಂಚಾಲಕರಾದ ಮಹೇಂದ್ರ ಕೋಟ್ಯಾನ್, ವಿಠ್ಠಲ ಜತ್ತನ್, ಪೂಜಾ ಮಂದಿರ ನಿರ್ಮಾಣದ ಗುತ್ತಿಗೆದಾರ ಅವಿನಾಶ್ ಪೂಜಾರಿ ಅಂಬಲಪಾಡಿ ಹಾಗೂ ಪರಿಸರದ ಭಕ್ತಾದಿಗಳು ಉಪಸ್ಥಿತರಿದ್ದರು.