ಉಡುಪಿ: ಕೇಂದ್ರ ಪುರಸ್ಕೃತ ” ನಮೋ ಡ್ರೋನ್ ದೀದಿ” ಕಾರ್ಯಕ್ರಮದಡಿ ದೀನ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿಯಲ್ಲಿ ರಚಿಸಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಉದ್ಯೋಗ ಸೃಜನೆಗಾಗಿ ಕೃಷಿ ಡೋನ್‌ಗಳನ್ನು ಕೃಷಿ ಉದ್ದೇಶಕ್ಕಾಗಿ ದ್ರವರೂಪದ ರಸಗೊಬ್ಬರ ಹಾಗೂ ಕೀಟನಾಶಕ ಸಿಂಪಡಣೆಗೆ ರೈತರಿಗೆ ಬಾಡಿಗೆ ಆಧಾರದಲ್ಲಿ ನೀಡಲು ಅನುವಾಗುವಂತೆ ಒದಗಿಸಲು ಉದ್ದೇಶಿಸಲಾಗಿದೆ.
ಮಹಿಳಾ ಸ್ವಸಹಾಯ ಸಂಘಗಳಿಗೆ ಯೋಜನೆಯಡಿ ಶೇ. 80 ರಷ್ಟು, ಗರಿಷ್ಠ ರೂ. 8 ಲಕ್ಷ ರೂ. ವರೆಗೆ ಕೃಷಿ ಡ್ರೋನ್ ಖರೀದಿಗೆ
ಸಹಾಯಧನ ದೊರೆಯಲಿದ್ದು, ಸಂಘದ ವಂತಿಗೆಯನ್ನು ಸ್ವಂತ ಮೂಲ ಅಥವಾ ಬ್ಯಾಂಕ್ ಸಾಲದ ಮೂಲಕ ಹೊಂದಾಣಿಕೆ
ಮಾಡಿಕೊಳ್ಳಬೇಕಾಗಿರುತ್ತದೆ. ಬ್ಯಾಂಕ್ ಸಾಲದ ಮೂಲಕ ಸಂಘದ ವಂತಿಗೆಯನ್ನು ಪಾವತಿಸಿದ್ದಲ್ಲಿ ಕೃಷಿ ಮೂಲಭೂತ ಸೌಕರ್ಯ ನಿಧಿ ಕಾರ್ಯಕ್ರಮದಡಿ ಶೇ. 3 ರಷ್ಟು ಬಡ್ಡಿ ಸಹಾಯಧನ ಪಡೆಯಲು ಅವಕಾಶವಿರುತ್ತದೆ.
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಮಹಿಳಾ ಸ್ವಸಹಾಯ ಸಂಘವು 1000-1500 ಹೆಕ್ಟೇರ್ ವ್ಯಾಪ್ತಿಯ ಕ್ಲಷ್ಟರ್‌ನಲ್ಲಿ
ಕಾರ್ಯನಿರ್ವಹಿಸಬೇಕಾಗಿದ್ದು, ಸಂಘದ ಒಬ್ಬ ಸದಸ್ಯರು ಡ್ರೋನ್ ಪೈಲೆಟ್ ಹಾಗೂ ಒಬ್ಬರು ಡ್ರೋನ್ ಸಹಾಯಕರಾಗಿ
ಕಾರ್ಯನಿರ್ವಹಿಸಬೇಕು. ತರಬೇತಿ ಹೊಂದಿ ಪ್ರಮಾಣ ಪತ್ರ ಪಡೆದ ಡ್ರೋನ್ ಪೈಲೆಟ್‌ನ್ನು “ಡೋನ್ ದೀದಿ” ಎಂದು ಕರೆಯಲಿದ್ದು, ಡೋನ್ ಪೈಲೆಟ್ ಆಗಲು ಕನಿಷ್ಟ 10ನೇ ತರಗತಿಯ ವಿದ್ಯಾರ್ಹತೆ ಹೊಂದಿರುವುದರೊಂದಿಗೆ ತರಬೇತಿ ಪಡೆಯಲು ಇಚ್ಚೆ ಉಳ್ಳವರಾಗಿರಬೇಕು.
DAY-NRLM ರಡಿ ರಚಿತ ಆಸಕ್ತ ಮಹಿಳಾ ಸ್ವಸಹಾಯ ಸಂಘಗಳು ಕೃಷಿ ಡ್ರೋನ್ ಪಡೆಯಲು ಉದ್ದೇಶಿಸಿದ್ದಲ್ಲಿ ಕೃಷಿ ಇಲಾಖೆಯ ಕಛೇರಿಗಳಿಗೆ ಜುಲೈ 21 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ
ಕೃಷಿ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.












