ಉಡುಪಿ: ಬಹುದಿನಗಳ ನಂತರ ಮತ್ತೆ ರಂಗ ಚಟುವಟಿಕೆ ಆರಂಭ

ಉಡುಪಿ: ಕೊರೊನಾ ಹಿನ್ನೆಲೆಯಲ್ಲಿ ಸ್ತಬ್ದವಾಗಿದ್ದ ರಂಗ ಚಟುವಟಿಕೆ ಉಡುಪಿಯಲ್ಲಿ ಮತ್ತೆ ಆರಂಭವಾಯಿತು.

ಮಣಿಪಾಲದ ನಿರ್ಮಿತಿ ಕೇಂದ್ರದ ಸುಂದರ ಪರಿಸರದಲ್ಲಿ ಭಾನುವಾರ ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ ಪರ್ಕಳ, ನಿರ್ಮಿತಿ ಕೇಂದ್ರ, ಮಣಿಪಾಲ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರ ಸಹಕಾರ ದೊಂದಿಗೆ ಶಿಲ್ಪಾ ಜೋಶಿಯವರ ಏಕವ್ಯಕ್ತಿ ರಂಗಪ್ರಯೋಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಭಾವಗೀತೆಗಳ ಭಾವಸಂಜೆಯಲ್ಲಿ ಉಡುಪಿಯ ಕಲಾವಿದರಾದ ರೇಖಾ ಸಾಮಗ, ಡಾ. ಪ್ರತಿಮಾ, ಡಾ. ಪ್ರಜ್ಞಾ ಮಾರ್ಪಳ್ಳಿ ಹಾಗೂ ರಂಜನಿ ಸುಂದರ ಭಾವಗೀತೆಗಳನ್ನು ಹಾಡಿ ಸಂಜೆಯ ಇಂಪನ್ನು ಹೆಚ್ಚಿಸಿದರು. ನಂತರ ನಡೆದ ಏಕವ್ಯಕ್ತಿ ಪ್ರದರ್ಶನ ‘ನನ್ನೊಳಗಿನ ಅವಳು’
ರಚನೆ ಹಾಗೂ ಅಭಿನಯ – ಶಿಲ್ಪಾ ಜೋಶಿ, ಗೀತಂ ಗಿರೀಶ್ ರವರ ಸಂಗೀತ ಹಾಗೂ ರವಿರಾಜ್ ಹೆಚ್.ಪಿ ಅವರ ಪರಿಕಲ್ಪನೆ ಹಾಗೂ ನಿರ್ದೇಶನದ ರಂಗಪ್ರಯೋಗ ಜನಮನ್ನಣೆಗೆ ಪಾತ್ರವಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಭಾ ಶೆಣೈ ಮಾತನಾಡಿದರು. ಸಮಾರಂಭದಲ್ಲಿ
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಹಿರಿಯ ಮುಂಬೈ ಕನ್ನಡ ರಂಗಭೂಮಿಯ ಹೆಸರಾಂತ ನಟ ಮೋಹನ್ ಮಾರ್ನಾಡ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಉಪಾಧ್ಯಕ್ಷರಾದ ನಾಗರಾಜ್ ಹೆಬ್ಬಾರ್, ಸಂಧ್ಯಾ ಶೆಣೈ, ಸುಗುಣ ಸುವರ್ಣ ಹಾಗೂ ಸಂಘಟಕ ಈಶ್ವರ ಶೆಟ್ಟಿ ಚಿಟ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

ಜೋಶಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಹರೀಶ್ ಜೋಶಿ ಸ್ವಾಗತಿಸಿದರು. ಜೋಶಿ ಪ್ರತಿಷ್ಠಾನದ ಕಾರ್ಯದರ್ಶಿ ಶಿಲ್ಪಾ ಜೋಶಿ ವಂದಿಸಿದರು. ರಂಗನಟಿ ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.