ಆಚಾರ್ಯ ಏಸ್: ಜೂ. 9ರಿಂದ ಸಿಇಟಿ 9-10ನೇ ತರಗತಿ, ಪ್ರಥಮ, ದ್ವಿತೀಯ ಪಿಯುಸಿ ಬ್ಯಾಚ್ ಪ್ರಾರಂಭ 

ಉಡುಪಿ: ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಯುಟಿ, ಜೆಇಇ ಮೇನ್ಸ್‌, ನೀಟ್, ಕಾಮರ್ಸ್‌ ಹಾಗೂ ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಆಚಾರ್ಯಾಸ್‌ ಏಸ್‌ನಲ್ಲಿ 9ನೇ ತರಗತಿ, ಹತ್ತನೇ ತರಗತಿ, ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ, ವಿದ್ಯಾರ್ಥಿಗಳಿಗೆ ದೈನಂದಿನ ಬ್ಯಾಚ್ ಹಮ್ಮಿಕೊಳ್ಳಲಾಗಿದೆ.
ಜೂನ್‌ 10ರಿಂದ ಈ ತರಗತಿಗಳು ಆರಂಭವಾಗಿ 2020ರ ಫೆಬ್ರವರಿಯವರೆಗೆ ಪ್ರತಿದಿನ ಸಂಜೆ 5ರಿಂದ 6.30ರ ವರೆಗೆ ಸೋಮವಾರದಿಂದ ಶನಿವಾರದವರೆಗೆ ನಡೆಯಲಿದೆ. ಸಿಇಟಿ ತರಗತಿಗಳು ಪ್ರತಿ ಭಾನುವಾರ ಬೆಳಗ್ಗೆ 8.30ರಿಂದ ಸಂಜೆ 4ರವರೆಗೆ, ನೀಟ್ ಹಾಗೂ ಜೆಇಇ ತರಗತಿಗಳು ಮತ್ತು ಈಗಾಗಲೇ ಆರಂಭಗೊಂಡಿರುವ ಹತ್ತನೇ ತರಗತಿಯ ವೆಕೇಶನ್‌ ಬ್ಯಾಚ್ ಪ್ರತೀ ಶನಿವಾರ ಹಾಗೂ ಭಾನುವಾರದಂದು ನಡೆಯಲಿದೆ.
ಈಗಾಗಲೇ ಏಸ್‌ನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ10ನೇ ತರಗತಿಯ ಸುಮಂತ್‌ ಕಾರಂತ್‌ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದು, ಪಿಯುಸಿಯ ಆದಿತ್ಯ ಎ.ರಾವ್‌ 10ನೇ ರ್‍ಯಾಂಕ್‌ ಪಡೆದಿದ್ದಾರೆ.
ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಫಿಸಿಕ್ಸ್‌, ಕೆಮಿಸ್ಟ್ರಿ, ಮ್ಯಾಥ್ಸ್, ಬಯೋಲಜಿ ಹಾಗೂ ಹತ್ತನೇ ತರಗತಿಯವರಿಗೆ ವಿಜ್ಞಾನ ಹಾಗೂ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಪ್ರತಿಭಾನ್ವಿತ ಉಪನ್ಯಾಸಕರ ನೇತೃತ್ವದಲ್ಲಿ ಈ ತರಬೇತಿ ಆಯೋಜನೆಗೊಂಡಿದ್ದು, ವಿದ್ಯಾರ್ಥಿಗಳ ಗರಿಷ್ಠ ಫಲಿತಾಂಶಕ್ಕಾಗಿ ಉಪಯುಕ್ತ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಬರೆಯುವ ವೇಗ ಮತ್ತು ನಿಖರತೆಗಾಗಿ ಪ್ರತ್ಯೇಕ ಕಾರ್ಯಾಗಾರಗಳು ಹಾಗೂ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹಾಗೂ ಸ್ಮರಣ ಶಕ್ತಿಯನ್ನು ವೃದ್ಧಿಸಲು ತಜ್ಞರಿಂದ ವಿಶೇಷ ತರಗತಿಗಳು ಕೂಡ ಆಯೋಜಿಸಲಾಗಿದೆ. ನೋಟ್ಸ್‌, ಮಾದರಿ ಪರೀಕ್ಷೆ ಹಾಗೂ ಏಸ್ ‌ಉಪನ್ಯಾಸಕರು ನಿರೂಪಿಸಿರುವ ಪ್ರಶ್ನೋತ್ತರ ಕೃತಿಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಉಡುಪಿ ತೆಂಕುಪೇಟೆ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿರುವ ಏಸ್‌ ಸಂಸ್ಥೆಯನ್ನು ಸಂಪರ್ಕಿಸಬೇಕೆಂದು ಸಂಸ್ಥೆಯ ನಿರ್ದೇಶಕ ಪಿ.ಲಾತವ್ಯ ಆಚಾರ್ಯ ತಿಳಿಸಿದ್ದಾರೆ.