ಉಡುಪಿ: ಯುವತಿ ನಾಪತ್ತೆ

ಉಡುಪಿ: ಮದುವೆ ಸಮಾರಂಭದ ಪ್ರಯುಕ್ತ ಜನವರಿ 16 ರಂದು ಕೆಮ್ಮಣ್ಣುವಿನ ಲಿಟ್ಲ್ ಫ್ಲವರ್ ಸಭಾಭವನಕ್ಕೆ ತೆರಳಿದ್ದ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆ ನಿವಾಸಿ ನಿಮ್ರಾಜ್ (19) ಎಂಬ ಯುವತಿಯು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ.

5 ಅಡಿ ಎತ್ತರ, ಗೋದಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು ಹಾಗೂ ಉರ್ದು ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣೆ ದೂ.ಸಂಖ್ಯೆ: 0820-2537999, ಪಿ.ಎಸ್.ಐ  ಮೊ.ನಂ: 9480805447 ಅಥವಾ ಉಡುಪಿ ವೃತ್ತ ನಿರೀಕ್ಷಕರು ಮೊ.ನಂ: 9480805430 ಗೆ ಮಾಹಿತಿ ನೀಡುವಂತೆ ಮಲ್ಪೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.